

ಕುಕನೂರು: ಕಾಂಗ್ರೆಸ್ ಅಧಿಕಾರಿ ಹಿಡಿಯಲು ಗ್ಯಾರಂಟಿ ಘೋಷಣೆ ಮಾಡಿದೆ ಹೊರತು ರಾಜ್ಯದ ಅಭಿವೃದ್ಧಿಗಾಗಿ ಅಲ್ಲ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಟೀಕಿಸಿದರು.
ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ 9 ವರ್ಷದ ಸಾಧನೆಯ ಕರಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.
ಗ್ಯಾರಂಟಿಗಳಿಂದ ರಾಜ್ಯ ಉಳಿಯುವುದಿಲ್ಲ. ಆರೋಗ್ಯ, ಶಿಕ್ಷಣ, ನೀರಾವರಿ, ರೈತಪರ ಕೆಲಸಗಳಿಗೆ ಯಾವುದೇ ಗ್ಯಾರಂಟಿ ನೀಡಲಿಲ್ಲ. ಇದುವರೆಗೂ ಕೇಂದ್ರ ಸರ್ಕಾರ ನೀಡುವ ಐದು ಕೆಜಿ ಅಕ್ಕಿಯನ್ನು ನೀಡುತ್ತಿದ್ದಾರೆ. 10 ಕೆಜಿ ಅಕ್ಕಿ ನೀಡದೆ ಜನರಿಗೆ ಮೋಸ ಮಾಡಿದೆ. ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ, ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸಮಸ್ಯೆ ಪರಿಹರಿಸಲು ಸರ್ಕಾರ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಲ್ಲಿ ಉಗ್ರರು ಸಿಗುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಎಚ್ಚರಿಕೆಯ ಕ್ರಮ ತೆಗೆದುಕೊಳ್ಳುತ್ತಿಲ್ಲ. ಗೃಹ ಸಚಿವ ಜಿ.ಪರಮೇಶ್ವರ ಅವರು ತನಿಖೆ ಮಾಡಲಾಗುವುದೆಂದು ಜಾರಿಗೊಳ್ಳುತ್ತಿದ್ದಾರೆ. ಈ ಹಿಂದೆಯೂ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಉಗ್ರರ ತಾಣವಾಗಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಯೋತ್ಪಾದಕರನ್ನು ಮಟ್ಟ ಹಾಕಿದರು. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪ್ರಾರಂಭಗೊಂಡಿದ್ದು, ಉಗ್ರರ ಜಾಡು ಕಾಣುತ್ತಿದೆ ಎಂದು ದೂರಿದರು.
ಶಾಸಕ ಬಸವರಾಜ ರಾಯರಡ್ಡಿ ಅವರು ಕ್ಷೇತ್ರಕ್ಕೆ ಕೃಷ್ಣೆ ನೀರು ಬರುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಅವರ ಮುಖಕ್ಕೆ ಹೊಡೆದಂಗೆ ಯಲಬುರ್ಗಾ ಕ್ಷೇತ್ರಕ್ಕೆ ಕೃಷ್ಣೆ ನೀರು ತರಲಾಗಿದೆ. ರಾಯರಡ್ಡಿಗೆ ಸದ್ಯ ರೈತರ ಕಾಳಜಿ ಇಲ್ಲ. ಕ್ಷೇತ್ರದಲ್ಲಿ 38 ಹೊಸ ಕೆರೆಗಳನ್ನು 2000 ಎಕರೆಯಲ್ಲಿ ನಿರ್ಮಿಸಲು 2500 ಕೋಟಿ ರೂ. ಅನುದಾನ ತರಲಾಗುವುದು ಎಂದು ರಾಯರಡ್ಡಿ ಹೇಳಿದ್ದಾರೆ. ಆದರೆ 2013ರಲ್ಲಿ ತುಂಗಾಭದ್ರಾ ನದಿಯ ನೀರಿನಿಂದ 12 ಕೆರೆ ತುಂಬಿಸುವ ಭರವಸೆ ನೀಡಿದ್ದರು. ಮೊದಲು ಆ ಮಾತನ್ನು ಈಡೇರಿಸಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಆಡಳಿತ ಬೇಸತ್ತು ಜನರು 2013ರಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ಮತ್ತೆ 2019ರಲ್ಲಿ ಬಹುಮತ ನೀಡಿದರು. ಈಗ ಮೂರನೇ ಬಾರಿಗೆ 2024ಕ್ಕೆ ಮತ್ತೆ ಮೋದಿಯೇ ಪ್ರಧಾನಿಯಾಗಲಿದ್ದಾರೆ. ಅವರಿಂದ ಭಾರತ ವಿಶ್ವಗುರು ಸ್ಥಾನ ಪಡೆದಿದೆ. ಭಾರತ ಆರ್ಥಿಕ ಸ್ಥಿತಿ 3ನೇ ಸ್ಥಾನ ಪಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಪ್ರಮುಖರಾದ ರಥನ ದೇಸಾಯಿ, ಸಿ.ಎಚ್.ಪೊಲೀಸ್ ಪಾಟೀಲ್, ಬಸಲಿಂಗಪ್ಪ ಭೂತೆ, ಅರವಿಂದಗೌಡ, ಅಯ್ಯನಗೌಡ, ಬಸನವನಗೌಡ ತೊಂಡಿಹಾಳ, ಶಿವಪ್ಪ ವಾದಿ, ಶರಣಪ್ಪ ಬಣ್ಣದಬಾವಿ, ಜಗನ್ನಾಥಗೌಡರ, ಹಂಚ್ಯಾಳಪ್ಪ ತಳವಾರ, ದ್ಯಾಮಣ್ಣ ಜಮಖಂಡಿ, ಫಕೀರಪ್ಪ ತಳವಾರ, ಮಾರುತಿ ಗಾವರಾಳ,