ಹಾಲಕೆರೆ ಅನ್ನದಾನೇಶ್ವರ ಮಹಾರಥೋತ್ಸವ ಸಂಭ್ರಮ

3 NRGL 4- rathotsava
Published on

ನರೇಗಲ್ಲ: ಸಮೀಪದ ಹಾಲಕೆರೆ ಗ್ರಾಮದಲ್ಲಿ ಸಾವಿರಾರು ಭಕ್ತರ ಹಷೋದ್ಘಾರದ ಮಧ್ಯೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ 174ನೇ ಮಹಾರಥೋತ್ಸವವು ಸಡಗರ ಸಂಭ್ರಮದಿಂದ ಶುಕ್ರವಾರ ನಡೆಯಿತು.

ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಾಡಿನ ವಿವಿಧ ಹರಗುರು ಚರಮೂರ್ತಿಗಳು ಭಾಗಿಯಾಗಿದ್ದರು. ಶ್ರೀಮಠದಿಂದ ಆರಂಭಗೊಂಡ ರಥೋತ್ಸವ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಪುನಃ ಮಠಕ್ಕೆ ಆಗಮಿಸಿ ಮಂಗಲಗೊಂಡಿತು.

ರಥೋತ್ಸವದಲ್ಲಿ ಮಹಿಳೆಯರು ಆರತಿ, ಕುಂಭ ಹೊತ್ತು ನಡೆದರೆ ವಿವಿಧ ವಾದ್ಯಮೇಳಗಳಾದ ಡೊಳ್ಳು ಕುಣಿತ, ಝಾಂಜ್, ನಂದಿಕೋಲು, ಭಜನಾ ಸೇರಿ ವಿವಿಧ ಮೇಳಗಳು ರಥೋತ್ಸವದ ಸಂಭ್ರಮ ಹೆಚ್ಚಿಸಿದ್ದವು. ರಥದ ಕಳಸಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತರು ಭಕ್ತಿ ಭಾವ ಪ್ರದರ್ಶಿಸಿದರು.

ಗದಗ, ಬಾಗಲಕೋಟೆ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ದಾವಣಗೆರಿ, ಬೆಂಗಳೂರು, ನರೇಗಲ್ಲ, ಗಜೇಂದ್ರಗಡ, ಜಕ್ಕಲಿ, ಯರೇಬೇಲೇರಿ, ನಿಡಗುಂದಿ, ನಿಡಗುಂದಿಕೊಪ್ಪ, ಮಾರನಬಸರಿ, ಬೂದಿಹಾಳ, ರಾಜೂರ, ವಳಬಳ್ಳಾರಿ, ಕರಮುಡಿ, ಯಲಬುರ್ಗಾ, ಕುಕನೂರ, ಗುಜಮಾಗಡಿ, ಸವಡಿ, ಡ.ಸ. ಹಡಗಲಿ ಸೇರಿ ಸುತ್ತಮುತ್ತಲಿನ ಸಾಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ಮಹಿಳೆಯರು ಆರತಿ, ಕಳಸದೊಂದಿಗೆ ಸಾಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net