ಹಾಲಗಿ ಗ್ರಾಪಂಗೆ ಶಿಲ್ಪಾ ಅಧ್ಯಕ್ಷೆ, ಶ್ರೀಕಾಂತ ಉಪಾಧ್ಯಕ್ಷ

31GTL1
Published on

ಗುತ್ತಲ: ಹಾಲಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಶಿಲ್ಪಾ ಹನುಮಂತಪ್ಪ ಗದಿಗೇರ ಹಾಗೂ ಉಪಾಧ್ಯಕ್ಷರಾಗಿ ಶ್ರೀಕಾಂತ ಮಹಾದೇವಪ್ಪ ಗೋಪಾಳಿ ಸೋಮವಾರ ಆಯ್ಕೆಯಾದರು.

ಹಾಲಗಿ, ಮರಡೂರ, ಗುಡಿಸಲುಕೊಪ್ಪ ಹಾಗೂ ಕೆರೆಕೊಪ್ಪ ಗ್ರಾಮಗಳನ್ನೊಳಗೊಂಡ 11 ಸದಸ್ಯ ಬಲದ ಹಾಲಗಿ ಗ್ರಾಪಂಗೆ ಎರಡನೇ ಅವಧಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಎಸ್​ಸಿಗೆ ಮೀಸಲಿದ್ದ ಕಾರಣ ಏಕೈಕ ಸದಸ್ಯೆ ಶಿಲ್ಪಾ ಹನುಮಂತಪ್ಪ ಗದಿಗೇರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು. ಇನ್ನೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಶ್ರೀಕಾಂತ ಮಹಾದೇವಪ್ಪ ಗೋಪಾಳಿ, ಬಸವಣ್ಣಯ್ಯ ತಿರಕಯ್ಯ ಯಳವತ್ತಿಮಠ, ಗೋವಿಂದಗೌಡ ಅಶೋಕಗೌಡ ಕಾಕಡೆ ನಾಮಪತ್ರ ಸಲ್ಲಿಸಿದ್ದರು. ಶ್ರೀಕಾಂತ ಅವರು 6 ಮತಗಳನ್ನು, ಬಸವಣ್ಣಯ್ಯ 2 ಹಾಗೂ ಗೋವಿಂದಗೌಡ ಅವರು 3 ಮತಗಳನ್ನು ಪಡೆದರು. 6 ಮತಗಳನ್ನು ಪಡೆದ ಶ್ರೀಕಾಂತ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವಿನಾಯಕ ಬೇವಿನಹಳ್ಳಿ ಘೊಷಿಸಿದರು.

ಗ್ರಾಪಂ ಸದಸ್ಯರಾದ ಬಸವರಡ್ಡಿ ಗೌಡರ, ರೇಣುಕಾ ಈಟಿ, ಶಾರಕ್ಕ ಕರೆಣ್ಣನವರ, ಗಂಗಾ ಮಡಿವಾಳರ, ವಿಜಯಕ್ಕ ಹೆಬ್ಬಾಳಹಿರೇಮಠ, ರಾಮನಗೌಡ ದೊಡ್ಡಗೌಡರ, ರುಕ್ಮಾ ಪಾಟೀಲ, ಪಿಡಿಒ ಬಸವರಾಜ ಮುಂಡವಾಡ ಹಾಗೂ ಗ್ರಾಪಂ ಸಿಬ್ಬಂದಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net