ಪ್ರೊಪೆಲೆಂಟ್ ಘಟಕ ಉದ್ಘಾಟಿಸಿ ; ಪ್ರಧಾನಿ ಮೋದಿಗೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಪತ್ರ

04TMK_SPM_HAL1
Published on

ತುಮಕೂರು : ಗುಬ್ಬಿ ಎಚ್‌ಎಎಲ್ ಲು ಹೆಲಿಕಾಪ್ಟರ್ ಉತ್ಪಾದನಾ ಟಕ ಮತ್ತು ತುಮಕೂರಿನ ಎಚ್‌ಎಂಟಿ ಜಾಗದಲ್ಲಿ ಇಸ್ರೋ ವತಿಯಿಂದ ‘ಪ್ರೊಪೆಲೆಂಟ್ ಟ್ಯಾಂಕ್ ಉತ್ಪಾದನಾ ಸೌಲಭ್ಯ ಟಕ’ ಕೂಡಲೇ ಕಾರ್ಯಾರಂಭ ಮಾಡಬೇಕು ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಈ ಎರಡೂ ಘಟಕಗಳಿಗೆ ಭಾನುವಾರ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಘಟಕಗಳು ಆರಂಭವಾದರೆ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ. ಜತೆಗೆ ಈ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳು ನಡೆದು ಪರೋಕ್ಷವಾಗಿಯೂ ಜನರಿಗೆ ನೆರವಾಗುವುದರಿಂದ ಕೂಡಲೇ ಉದ್ಘಾಟನೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

2016ರ ಡಿ.3ರಂದು ಎಚ್‌ಎಎಲ್ ಟಕಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಆಗಮಿಸಿ ಭೂಮಿ ಪೂಜೆ ನೆರವೇರಿಸಿದ್ದರು, ಅವರೇ ಭರವಸೆ ನೀಡಿದಂತೆ ಡಿಸೆಂಬರ್ 2018ರ ಹೊತ್ತಿಗೆ ಉತ್ಪಾದನೆ ಪ್ರಾರಂಭಿಸಬಹುದೆಂದು ನಿರೀಕ್ಷಿಸಲಾಗಿತ್ತು. ಸ್ವಲ್ಪ ತಡವಾಗಿಯಾದರೂ ಘಟಕ ಸಿದ್ಧವಾಗಿದೆ.

2019ರ ೆ.6ರಂದು ತುಮಕೂರು ನಗರದ ಎಚ್‌ಎಂಟಿ ಜಾಗದಲ್ಲಿ ಇಸ್ರೋ ವತಿಯಿಂದ ‘ಪ್ರೊಪೆಲೆಂಟ್ ಟ್ಯಾಂಕ್ ಪ್ರ್ರೊಡಕ್ಷನ್’ ಸೌಲಭ್ಯಕ್ಕೂ ಭೂಮಿಪೂಜೆ ನೆರವೇರಿಸಲಾಗಿತ್ತು. ಈಗ ಈ ಘಟಕ ಉತ್ಪಾದನೆಗೂ ಸಿದ್ಧವಾಗಿದ್ದು, ದೇಶದ ಪಾಲಿಗೆ ಮಹತ್ವಾಕಾಂಕ್ಷಿ ಎನಿಸಿದೆ. ಈ ಎರಡೂ ಟಕಗಳನ್ನು ಶ್ರೀವಾಗಿ ಪ್ರಾರಂಭಿಸಿ ಸ್ಥಳೀಯರಿಗೆ ಹೆಚ್ಚು ಉದ್ಯೋಗ ದೊರೆಯುವಂತೆ ಮಾಡಬಹುದು ಎಂದರು.

ನಾನು ಸಂಸದನಾಗಿದ್ದಾಗ ಶಂಕುಸ್ಥಾಪನೆ ನಡೆಸಿದ್ದ ಎರಡೂ ಘಟಕಗಳು ಕಾರ್ಯಾರಂಭಕ್ಕೆ ಸಿದ್ಧವಾಗಿರುವುದು ಸಾರ್ಥಕಭಾವ ಮೂಡಿಸಿದೆ, ಹಾಗೆಯೇ ಸ್ಥಳೀಯ ಯುವಕರು, ನಾಗರಿಕರಿಗೂ ಉದ್ಯೋಗ ಸಿಕ್ಕರೆ ಈ ಕರೊನಾ ಸಂದರ್ಭದಲ್ಲಿ ಹೆಚ್ಚು ನೆರವಾಗಲಿದೆ. ಈ ನಿಟ್ಟಿನಲ್ಲಿ ಮಾನ್ಯ ಪ್ರಧಾನಮಂತ್ರಿಗೆ ವಿವರವಾಗಿ ಆಂಗ್ಲ ಭಾಷೆಯಲ್ಲಿ ಕಾಗದವನ್ನು ಈ-ಮೇಲ್ ಮೂಲಕ ಕಳುಹಿಸಿದ್ದೇನೆ ಎಂದರು. ಕರೊನಾ ತೀವ್ರತೆಯಿಂದ ಉಂಟಾಗಿರುವ ಉದ್ಯೋಗ ನಷ್ಟ ಮತ್ತು ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯಲ್ಲಿ, ಜಿಲ್ಲೆಯ ಈ ಟಕಗಳನ್ನು ಶ್ರೀವಾಗಿ ಆರಂಭಿಸಬೇಕು. ಜತೆಗೆ ಸ್ಥಳೀಯ ಯುವಕರಿಗೆ ಉದ್ಯೋಗದಲ್ಲಿ ಮೀಸಲು ನೀಡಿ, ಜನಸಾಮಾನ್ಯರ ಸಂಕಷ್ಟಕ್ಕೆ ನೆರವಾಗುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು. ಕಾಂಗ್ರೆಸ್ ಮುಖಂಡರಾದ ರಾಯಸಂದ್ರ ರವಿಕುಮಾರ್, ಹೆಬ್ಬೂರು ಚಿಕ್ಕಸ್ವಾಮಿ, ಕುಚ್ಚಂಗಿ ರಮೇಶ್, ಜಗನ್ನಾಥ್ ಮತ್ತಿತರರು ಇದ್ದರು.

ಜಿಲ್ಲೆಯ ಪಾಲಿಗೆ ಹೆಮ್ಮೆ ಎನಿಸುವ ಗುಬ್ಬಿ ತಾಲೂಕಿನಲ್ಲಿ ಎಚ್‌ಎಎಲ್, ತುಮಕೂರಿನ ಎಚ್‌ಎಂಟಿ ಜಾಗದಲ್ಲಿ ಇಸ್ರೋ ಘಟಕ ಮಹತ್ವಾಕಾಂಕ್ಷಿ ಸಾರ್ವಜನಿಕ ಉದ್ಯಮಗಳಾಗಿದ್ದು, ಕಾರ್ಯಾರಂಭಕ್ಕೆ ಸಿದ್ಧವಾಗಿದೆ. ಕೂಡಲೇ ಉದ್ಘಾಟಿಸುವಂತೆ ಜಿಲ್ಲೆಯ ಜನರ ಪರವಾಗಿ ಪ್ರಧಾನಿ ಅವರಲ್ಲಿ ಪತ್ರದ ಮೂಲಕ ಮನವಿ ಮಾಡಿದ್ದೇನೆ. ಜತೆಗೆ ಉದ್ಯೋಗ ನೀಡುವಂತೆ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದೇನೆ. ಎಸ್.ಪಿ.ಮುದ್ದಹನುಮೇಗೌಡ ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net