

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಇಸ್ಲಾಮಿನ ಪಂಚ ಕಾರ್ಯಗಳಲ್ಲಿ ಒಂದಾಗಿರುವ ಹಜ್ ಯಾತ್ರೆ ಸಾಮರ್ಥ್ಯ ಇದ್ದವರಿಗೆ ಕಡ್ಡಾಯ. ಈ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದ ದೇವನಿಗೆ ಸ್ತುತಿ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಮುಡಿಪು, ಉಳ್ಳಾಲ ಬ್ಲಾಕ್ ಸಮಿತಿ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರ ನಾಗರಿಕರಿಂದ ಉಚ್ಚಿಲ ಕಿಂಯಾಂಝಾ ಗಾರ್ಡನ್‌ನಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಕರ್ನಾಟಕ ಅಲೈಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅವರನ್ನು ಬೀಳ್ಕೊಡಲಾಯಿತು. ಅಕ್ಟರ್ ಸಅದಿ ದುಅ ನೆರವೇರಿಸಿದರು. ಉಳ್ಳಾಲ ಬ್ಲಾಕ್ ಸಮಿತಿ ರಮೇಶ್ ಶೆಟ್ಟಿ ಬೋಳಿಯಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಮುಡಿಪು ಬ್ಲಾಕ್ ಸಮಿತಿ ಅಧ್ಯಕ್ಷ ಪ್ರಶಾಂತ್ ಕಾಜವ, ಮುಖಂಡರಾದ ಮುಸ್ತಫಾ ಅಬ್ದುಲ್ಲಾ, ಟಿ.ಎಸ್.ಅಬ್ದುಲ್ಲಾ, ಪ್ರಕಾಶ್ ಕುಂಪಲ, ನಗರಸಭೆ ಅಧ್ಯಕ್ಷೆ ಶಶಿಕಲಾ, ಕಣಚೂರು ಮೋನು, ದಿನೇಶ್ ರೈ, ಟಿ.ಎಸ್.ಅಬೂಬಕರ್, ಟಿ.ಕೆ.ಸುಧೀರ್, ಸದಾನಂದ ಶೆಟ್ಟಿ, ಶಾಹುಲ್ ಹಮೀದ್, ಸುರೇಶ್ ಭಟ್ನಗರ, ಎನ್.ಎಸ್.ಕರೀಮ್, ಅಬ್ಬಾಸ್ ಅಲಿ, ಇಬ್ರಾಹಿಂ ತಪ್ಷಿಯಾ ನಡುಪದವು, ಮನ್ಸೂರ್ ಮಂಚಿಲ, ಜಲೀಲ್ ಮೋಂಟುಗೋಳಿ, ಅರುಣ್ ಡಿಸೋಜ, ಮುಸ್ತಫಾ ಹರೇಕಳ, ಮೊಹಮ್ಮದ್ ಮೋನು ಮಲಾರ್, ದೇವಕಿ ಉಳ್ಳಾಲ, ಎನ್.ಎಸ್.ನಾಸೀರ್ ನಡುಪದವು, ಅಚ್ಯುತ ಗಟ್ಟಿ, ಎ.ಕೆ.ಅಬ್ದುಲ್ ರಹ್ಮಾನ್, ರವಿರಾಜ್ ಶೆಟ್ಟಿ, ಹಮೀದ್ ಹಸನ್ ಮಾಡೂರು, ದೇವದಾಸ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ಅಬ್ದುಲ್ ರಹ್ಮಾನ್ ಕೋಡಿಜಾಲ್ ಸ್ವಾಗತಿಸಿದರು.