ಬುದ್ಧಿಮಾಂದ್ಯನಿಗೆ ಕ್ಷೌರ ಮಾಡಿದ ಸ್ನೇಹ ಬಳಗ

Haircut to a mentally retarded person
Published on

ಅಕ್ಕಿಆಲೂರ: ಕಳೆದೊಂದು ವರ್ಷದಿಂದ ಬಸ್ ನಿಲ್ದಾಣದಲ್ಲಿ ಕಾಲ ಕಳೆಯುತ್ತಿದ್ದ ತಮಿಳನಾಡು ಮೂಲದ ಬುದ್ಧಿಮಾಂದ್ಯನಿಗೆ ಕ್ಷೌರ, ಸ್ನಾನ ಮಾಡಿಸಿ, ಹೊಸಬಟ್ಟೆ ತೊಡಿಸುವ ಮೂಲಕ ಆಡೂರ ಗ್ರಾಮದ ಸ್ನೇಕ್ ಕೃಷ್ಣರೆಡ್ಡಿ ಸ್ನೇಹ ಬಳಗದ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.

ಆಡೂರ ಗ್ರಾಮದ ಬಸ್ ನಿಲ್ದಾಣದಲ್ಲಿ ಕಳೆದೊಂದು ವರ್ಷದಿಂದ ಮಳೆ, ಚಳಿಯನ್ನದೆ ಭಿಕ್ಷೆ ಬೇಡಿ ಜೀವಿಸುತ್ತಿದ್ದ ತಮಿಳನಾಡು ಮೂಲದ ಬುದ್ಧಿಮಾಂದ್ಯನ ಸ್ಥಿತಿ ಗಮನಿಸಿದ ಸ್ನೇಹ ಬಳಗದ ಸದಸ್ಯರು, ಭಾನುವಾರ ವ್ಯಕ್ತಿಯನ್ನು ಕರೆತಂದು ತಾವೇ ಕ್ಷೌರ ಮಾಡಿದ್ದಾರೆ. ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿದ್ದಾರೆ. ಅಲ್ಲದೆ, ಆತನಿಗೆ ಹೊಲದಲ್ಲಿ ಕೃಷಿ ಕೆಲಸ ನೀಡುವಂತೆ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ. ಬಳಗದ ಅಧ್ಯಕ್ಷ ಮಹಾಂತೇಶ ಶಂಕ್ರಿಕೊಪ್ಪ, ಕೃಷ್ಣರೆಡ್ಡಿ, ಪ್ರಕಾಶ ಮೆಳ್ಳಳ್ಳಿ, ರಾಘವೇಂದ್ರ ಕಲಾಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net