

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಷ್ಠಿತ ಗಾನಿರ್ಯರ್ ಹೇರ್ ಕಲರಿಂಗ್ ಕಂಪನಿ ನಗರದ ಕೆಲಗೇರಿ ರಸ್ತೆಯ ಸಿಲ್ವರ್ ಆರ್ಚರ್ಡ್ನಲ್ಲಿ ಆರಂಭಿಸಿರುವ ಉಚಿತ ಹೇರ್ ಕಲರಿಂಗ್ ಅಭಿಯಾನ ಬುಧವಾರ ಸಂಪನ್ನಗೊಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಿಲ್ವರ್ ಆರ್ಚರ್ಡ್ನ ಉದ್ಯಾನದಲ್ಲಿ ಮಂಗಳವಾರದಿಂದ 2 ದಿನಗಳ ಕಾಲ ಏರ್ಪಡಿಸಿದ್ದ ಅಭಿಯಾನದಲ್ಲಿ ನೂರಾರು ಜನರು ಭಾಗವಹಿಸಿ ಹೇರ್ ಕಲರಿಂಗ್ ಮಾಡಿಸಿಕೊಂಡರು.
ಮೇ 16ರಿಂದ ಕಲ್ಯಾಣನಗರ 5ನೇ ಕ್ರಾಸ್ನ ಸಮುದಾಯ ಭವನದಲ್ಲಿ ಅಭಿಯಾನ ಆರಂಭವಾಗಲಿದ್ದು, ನಿತ್ಯ ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ನಡೆಯಲಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿಯಾನದ ಪ್ರಯೋಜನ ಪಡೆಯಬೇಕು. ಕಂಪನಿಯ ಪರಿಣಿತರು ಪುರುಷರು ಹಾಗೂ ಮಹಿಳೆಯರಿಗೆ ಉಚಿತ ಹೇರ್ ಕಲರಿಂಗ್ ಮಾಡಲಿದ್ದಾರೆ.