

ಶ್ರೀನಿವಾಸಪುರ: ತಾಲೂಕಿನಾದ್ಯಂತ ಶನಿವಾರ ಮಧ್ಯಾಹ್ನ ಬಿದ್ದ ಮಳೆಯಿಂದ ರೈತರಿಗೆ ಒಂದಿಷ್ಟು ಮೊಗದಲ್ಲಿ ನೆಗೆ ಬೀರುತ್ತಿದೆ. ಮಾವು ಬೆಳೆಗಾರರಲ್ಲಿ, ಟೊಮ್ಯಾಟೊ, ಇತರೆ ತರಕಾರಿ ಬೆಳೆಯುತ್ತಿರುವ ಇಷ್ಟು ಮಳೆಯಿಲ್ಲದೆ, ಬೆಳೆಗಳಿಗೆ ನೀರು ಸಮಂಜಸವಾಗಿ ಕಟ್ಟಲು ಸಾಧ್ಯವಾಗದೆ ರೈತರು ಸಂಕಷ್ಟದಲ್ಲಿ ಇದ್ದರು.
ತಾಲೂಕಿನ ಕೆಲವು ರೋಣೂರು, ರಾಯಲ್ಪಾಡು, ನೆಲವಂಕಿ ಹೋಬಳಿಗಳ ಗ್ರಾಮಗಳಲ್ಲಿ ಆಲಿಕಲ್ಲು ಮಳೆ ಬಿದಿದ್ದು, ಇದರಿಂದ ಕೆಲವಡೆ ಟೊಮ್ಯಾಟೊ, ಇತರೆ ತರಕಾರಿ ಬೆಳಗಾರರಲ್ಲಿ ಆತಂಕ ಮೂಡಿಸಿದ್ದು, ಆಕಾಲಿಕ ಮಳೆಯಿಂದಾಗಿ ಕೆಲವರಲ್ಲಿ ನಗು ಮುಖ ಅರಳಿದ್ದರೆ. ಇನ್ನು ಕೆಲವರಲ್ಲಿ ಆತಂಕ ವ್ಯಕ್ತವಾಗಿದೆ. ಒಟ್ಟಿನಲ್ಲಿ ಅಕಾಲಿಕ ಮಳೆಯಿಂದ ಭೂಮಿ ತಂಪೆರೆದಿದ್ದು, ಮೂಕ ಜೀವಿಗಳಿಗೆ ಒಂದಿಷ್ಟು ಆಹಾರ, ನೀರು ಸಿಕ್ಕಂಗೆ ಹಾಗಿದೆ. ರಾಯಲ್ಪಾಡು ಹೋಬಳಿಯ ಕಂಬಲಾಪಲ್ಲಿ ಗ್ರಾಮದಲ್ಲಿ ಬಿರುಸಿನ ಬಿರುಗಾಳಿ, ಮಳೆಯಿಂದಾಗಿ ಗ್ರಾಮದಲ್ಲಿ ಎರಡು ವಿದ್ಯುತ್ ಕಂಬಗಳು ಧರೆಗೆ ಉರಳಿದರೆ, ಮನೆಯ ಮುಂದೆ ಹಾಕಿದ್ದ ಜಿಂಕ್ ಶೀಟ್ಗಳು ಗಾಳಿ ತೆಲಿ ಹಾರುತ್ತಿದ್ದು ಕಂಡು ನೋಡುಗರು ಗಾಬರಿಯಿಂದ ವೀಕ್ಷಿಸುತ್ತಿದ್ದರು. ಒಟ್ಟಿನಲ್ಲಿ ಬಿರುಗಾಳಿ, ಗುಡುಗು ಸಹಿತ ಮಳೆಯಿಂದ ಭೂಮಿಯು ತಂಪು ಎರೆದು, ಬಿರುಗಾಳಿ, ಗುಡುಗಿನಿಂದ ಸಾರ್ವಜನಿಕರು ಭಯವಾತರಣದಲ್ಲಿ ಇದಿದ್ದು ಕಂಡು ಬಂತು.