

ಶೃಂಗೇರಿ: ತಾಲೂಕಿನ ಹಲವು ಕಡೆ ಮಂಗಳವಾರ ಮಧ್ಯಾಹ್ನ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಆಲಿಕಲ್ಲು ಮಳೆಯಾಯಿತು.
ಮಲ್ಲಿಕಾರ್ಜುನ ಬೀದಿ, ಈಶ್ವರ ಗಿರಿ, ಭಾರತೀಬೀದಿ, ಗಾಂಧಿ ಮೈದಾನ ಇತ್ಯಾದಿ ಕಡೆ ಮರಗಳು ಬಿದ್ದು ವಿದ್ಯುತ್ ವ್ಯತ್ಯಯಗೊಂಡಿದೆ.ಪೊಲೀಸ್ ಠಾಣೆ ಎದುರು ಇದ್ದ ತೆಂಗಿನಮರ ಬಿದ್ದು ಠಾಣೆಯ ಶೀಟುಗಳು ಸ್ವಲ್ಪ ಜಖಂಗೊಂಡಿವೆ. ಮೆಣಸೆ ಸಮೀಪ ಮನೆಯೊಂದರ ಮೇಲೆ ಮರ ಬಿದ್ದಿದ್ದು, ಅದೃಷ್ಟವಶಾತ್ ಹೆಚ್ಚಿನ ಅನಾಹುತವಾಗಿಲ್ಲ. ಮೆಸ್ಕಾಂ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದ್ದಾರೆ.
ಅಡ್ಡಗದ್ದೆ, ಕೆರೆಮನೆ, ಮಸಿಗೆ, ಹಾಲಂದೂರು, ಮೆಣಸೆ ಮುಂತಾದ ಕಡೆ ಮಳೆಯಾಗಿದೆ. ಸುಮಾರು ಅರ್ಧಗಂಟೆ ಕಾಲ ಬಿರುಗಾಳಿ ಸಹಿತ ಮಳೆಯಿಂದ ಹಲವು ಕಡೆ ಆತಂಕವಾತಾವರಣ ಸೃಷ್ಟಿಸಿದ್ದು ಮತ್ತೆ ಬಿಸಿಲಿನ ವಾತಾವರಣ ಕಾಣಿಸಿಕೊಂಡಿತು.