

ಬಾಗೂರು: ಪುರಾಣಪ್ರಸಿದ್ಧ ಶ್ರೀ ಸಂತೇ ಕಾಳೇಶ್ವರಿ ಹಾಗೂ ಚಿಕ್ಕಮ್ಮ ದೇವಿ ಅಮ್ಮನವರ ದೇಗುಲಗಳ ಉದ್ಘಾಟನೆ ಕಾರ್ಯಕ್ರಮ ಮಾ. 23ರಂದು ನಡೆಯಲಿದೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಮಾನ ಗೋಪುರ, ಮುಖಮಂಟಪ ಉದ್ಘಾಟನೆ ಮತ್ತು ಮಹಾ ಕುಂಭಾಭಿಷೇಕ ಮಹೋತ್ಸವ ನಡೆಯಲಿದೆ. ಇದರ ಅಂಗವಾಗಿ 21ರ ಬೆಳಗ್ಗೆ 9ಕ್ಕೆ ಗಣಪತಿ ಪೂಜೆ, ಅಘೋರ ಹೋಮ, ಪ್ರಸಾದ ವಾಸ್ತು ಬಲಿ, ತೀರ್ಥ ಪ್ರಸಾದ ವಿನಿಯೋಗ, 22ರಂದು ಗಣಪತಿ ಪ್ರಾರ್ಥನೆ, ಬಿಂಬ ಶುದ್ಧಿ, ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.
23ರ ಬೆಳಗ್ಗೆ ಪ್ರತಿಷ್ಠಾಪನಾ ಹೋಮ, ನೇತ್ರೋನ್ಮಿಲನ, ದುರ್ಗಾ ಹೋಮ, ಪೂರ್ಣಾಹುತಿ, ನಂತರ ಕುಂಭಾಭಿಷೇಕ , ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿದೆ. ಮಧ್ಯಾಹ್ನ 12ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಹಾಸನದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಸಕ ಬಾಲಕೃಷ್ಣ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಡಿಸಿ ಸತ್ಯ ಭಾಮಾ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಗೂರು ಮಂಜೇಗೌಡ ಇತರರು ಭಾಗವಹಿಸಲಿದ್ದಾರೆ.