ವೈಚಾರಿಕ ಪ್ರಜ್ಞೆ ಮೂಡಿಸುವ ಮಾಧ್ಯಮ; ಸಮಾಜ ಸೇವಕಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗೀತಾಬಾಯಿ ಭೀಮಾನಾಯ್ಕ ಅಭಿಮತ

28032022 Hb halli dram day
Published on

ಹಗರಿಬೊಮ್ಮನಹಳ್ಳಿ: ಸಾಮಾಜಿಕವಾಗಿ ವೈಚಾರಿಕ ಪ್ರಜ್ಞೆ ಮೂಡಿಸುವ ಮಾಧ್ಯಮವಾಗಿರುವ ರಂಗಭೂಮಿಯನ್ನು ಪೋಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಸಮಾಜ ಸೇವಕಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗೀತಾಬಾಯಿ ಭೀಮಾನಾಯ್ಕ ಹೇಳಿದರು.

ಪಟ್ಟಣದ ಕನ್ಯಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಸುಯೋಧನ ಪ್ರಕಾಶನ, ಬಂಡಾಯ ಸಾಹಿತ್ಯ ವೇದಿಕೆ, ಕರ್ನಾಟಕ ಲೇಖಕಿಯರ ಬಳಗ ಭಾನುವಾರ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾಜಿ ಡಿಸಿಎಂ ದಿ.ಎಂ.ಪಿ.ಪ್ರಕಾಶ್ ರಂಗಭೂಮಿ ಪೋಷಣೆಗೆ ಆದ್ಯತೆ ನೀಡಿದ್ದರು. ಹವ್ಯಾಸಿ ರಂಗಕಲಾವಿದರಾಗಿ ಅನೇಕರಿಗೆ ಸ್ಪೂರ್ತಿಯಾಗಿದ್ದರು. ಈ ಭಾಗದ ಹಿರಿಯ ರಂಗಕರ್ಮಿ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೋಗಳಿ ಪಂಪಣ್ಣ ಸೇವೆ ಅವಿಸ್ಮರಣೀಯ ಎಂದರು.

ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‌ನ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ ಮಾತನಾಡಿ, ರಂಗಭೂಮಿ ಚಳವಳಿಗೆ ಪೂರಕವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ಶೋಷಣೆಗಳನ್ನು ತಡೆಗಟ್ಟುವಲ್ಲಿ ಮಹಿಳಾ ಸಾಹಿತ್ಯ ಅಗತ್ಯ ಎಂದರು.

ಸಾಹಿತಿ ಅಂಜನಮ್ಮ ಕೃಷ್ಣಪ್ಪ ಕವನ ವಾಚನ ಮಾಡಿದರು. ಕವಯತ್ರಿಗಳಾದ ಶೈಲಜಾ ಅಡೂರ್ ಶೆಟ್ಟರ್, ಅಂಜಲಿ ಬೆಳಗಲ್, ಭಾರತಿ ಮೂಲಿಮನಿ ಸೇರಿ 20ಕ್ಕೂ ಹೆಚ್ಚು ಕವಯತ್ರಿಯರನ್ನು ಗೌರವಿಸಲಾಯಿತು.

ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಸವಿತಾ ಆನಂದ್, ಅಮ್ಮ ಸಾಂಸ್ಕೃತಿಕ ಕಲಾ ಕ್ರೀಡಾಸಂಸ್ಥೆ ಅಧ್ಯಕ್ಷೆ ಎಂ.ಪಿ.ಎಂ.ಚನ್ನಮ್ಮ, ಕಲಾವಿದರ ಒಕ್ಕೂಟದ ಅಧ್ಯಕ್ಷ ಕೊಟ್ರಯ್ಯ ಹಿರೇಮಠ, ಉಪನ್ಯಾಸಕ ಮಲ್ಲಿಕಾರ್ಜುನ ಇತರರಿದ್ದರು. ಮಹಾಂತೇಶ ತಂಡ ರಂಗಭೂಮಿ ಗೀತೆ, ಎಚ್.ಬಿ.ಪ್ರಿಯಾಂಕ ಗೀತ ಗಾಯನ, ಕದಳಿ ಮಹಿಳಾ ವೇದಿಕೆ ಸವಿತಾ ಆನಂದ್, ಮಧುರೆಡ್ಡಿ ತಂಡ, ಕಲ್ಪವೃಕ್ಷ ತಂಡದ ದಾಕ್ಷಾಯಣಿ ವಾಮದೇವ ವಚನ ಗಾಯನ, ಜಿಜೆ ಸ್ಟಾರ್ ಸನ್ ತಂಡ ನೃತ್ಯ ಪ್ರದರ್ಶನ ನೀಡಿದರು. ಉಪನ್ಯಾಸಕ ಜಯಸೂರ್ಯ, ವಿದ್ಯಾರ್ಥಿನಿ ಚೈತ್ರಾ ವೇದಿಕೆ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net