ನಿವೇಶನದ ಹಕ್ಕುಪತ್ರಗಳನ್ನು ನೀಡಲು ಕ್ರಮವಹಿಸಿ

H b halli Certificate of title give
ನಿವೇಶನ ಹಕ್ಕುಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿ ಹಗರಿಬೊಮ್ಮನಹಳ್ಳಿ ಉಪತಹಸೀಲ್ದಾರ್ ಶಿವಕುಮಾರಗೌಡಗೆ ಡಾ.ಬಿ.ಆರ್.ಅಂಬೇಡ್ಕರ್ ನಗರವಾಸಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ಜಯಸೂರ್ಯ, ನಾಗರಾಜ, ಪರಶುರಾಮ ಇದ್ದರು.
Published on

ಹಗರಿಬೊಮ್ಮನಹಳ್ಳಿ: ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಉಪತಹಸೀಲ್ದಾರ್ ಶಿವಕುಮಾರಗೌಡಗೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದ ನಿವಾಸಿಗಳು ಮಂಗಳವಾರ ಮನವಿ ಸಲ್ಲಿಸಿದರು.

ಪ್ರಮುಖ ಜಯಸೂರ್ಯ ಮಾತನಾಡಿ, ಪಟ್ಟಣದ ಹಳೆಯ ಊರಿನ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ವಾಸ ಮಾಡುವಂತೆ ದಲಿತ ಸಮುದಾಯದವರಿಗೆ 1968ರಲ್ಲಿ ಅಧಿಕಾರಿಗಳು ಸೂಚಿಸಿದ್ದರು.

ಭೂರಹಿತ ಮತ್ತು ವಸತಿ ರಹಿತ ಕೃಷಿ ಕಾರ್ಮಿಕರಿಗೆ ಮನೆ ನಿವೇಶನ ಹಂಚಿಕೆ ಆದೇಶದಂತೆ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರಗಳನ್ನು ನೀಡಿದ್ದರೂ, ಇದುವರೆಗೂ ಬಹುತೇಕರಿಗೆ ತಲುಪಿಲ್ಲ ಎಂದು ದೂರಿದರು. ಸರ್ವೇ ನಂ.228 ರಲ್ಲಿ 1972-73 ನೇ ಸಾಲಿನಲ್ಲಿ ಹಡಗಲಿ ತಾಲೂಕು ಇದ್ದಾಗ ಫಲಾನುಭವಿಗಳಿಗೆ ನೀಡಿದ ನಿವೇಶನ ಹಕ್ಕುಪತ್ರ ಮತ್ತು ಲೇ-ಔಟ್ ದಾಖಲೆ ಹುಡುಕಿಸಿ ನೀಡಬೇಕು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿದರು. ನಿವಾಸಿಗಳಾದ ನಾಗರಾಜ, ಪರಶುರಾಮ, ರತ್ನಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net