

ಹಗರಿಬೊಮ್ಮನಹಳ್ಳಿ: ಪಟ್ಟಣದ ತಂಬ್ರಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಶುಕ್ರವಾರ ಪೂಜಾ ಕೈಂಕರ್ಯಗಳೊಂದಿಗೆ ಸರಸ್ವತಿ ಮೂರ್ತಿ ಪ್ರತಿಷ್ಠಾಪಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಗದ್ದಿಕೆರೆ ಮಠದ ಶ್ರೀ ಚರಂತೇಶ್ವರ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿನಿತ್ಯ ವಿದ್ಯಾಲಯ ಪ್ರವೇಶಿಸುವಾಗ ಶಾರದಾ ಮಾತೆಗೆ ನಮಿಸಿದರೆ ಮನಸ್ಸು ನಿರ್ಮಲವಾಗುತ್ತದೆ.
ಆಗ ವಿದ್ಯಾರ್ಥಿ ಜೀವನ ಬಂಗಾರದಂತಿರುತ್ತದೆ. ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಿ, ಉತ್ತಮ ಅಂಕಗಳನ್ನು ಗಳಿಸಿ, ಉನ್ನತ ಶಿಕ್ಷಣ ಪಡೆಯಲಿ ಎಂದು ಆಶಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಎಸ್.ಕೆ.ಜಗದೀಶ, ಉಪಾಧ್ಯಕ್ಷ ಮಲ್ಲಿಕಾರ್ಜುನ, ಸದಸ್ಯರಾದ ಅಕ್ಕಿ ಬಸವರಾಜ, ಮರುಳಾರಾಧ್ಯ ಸ್ವಾಮಿ, ವೆಂಕನಗೌಡ, ಜಿ.ನಾಗರಾಜ, ಮುಖ್ಯಶಿಕ್ಷಕ ರವಿ ನಾಯ್ಕ, ಶಿಕ್ಷಕರಾದ ಸುರೇಶ, ಆನಂದ, ಲಕ್ಷ್ಮಣ, ಸಂತೋಷ್, ದೈಹಿಕ ಶಿಕ್ಷಕರಾದ ರಾಜಶೇಖರ್‌ಗೌಡ, ವೀಣಾ ಎಫ್‌ಡಿಸಿ ಮಂಜುನಾಥ, ವಿದ್ಯಾರ್ಥಿಗಳು, ಪಾಲಕರು ಇದ್ದರು.