ಪೊಲೀಸರೆಂದರೆ ಜನರಿಗೆ ಭಯ ಬೇಡ

hbh-1
ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಸಾರ್ವಜನಿಕರ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಪಿಎಸ್‌ಐ ನಾಗರಾಜ ಕೊಟಿಗಿ, ಮುಖ್ಯಪೇದೆ ಕಿರಣಕುಮಾರ, ಪೇದೆಗಳಾದ ಪ್ರಸನ್ನ ಮತ್ತು ಶಿಲ್ಪಾ ಇದ್ದರು.
Published on

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಶನಿವಾರ ಸಾರ್ವಜನಿಕರ ಮನೆಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಪಿಎಸ್‌ಐ ನಾಗರಾಜ ಕೊಟಿಗಿ ಮಾತನಾಡಿ, ಪೊಲೀಸ್ ಎಂದರೆ ಸಾರ್ವಜನಿಕರಲ್ಲಿರುವ ಭಯ, ಯಾವುದೇ ಸತ್ಯ ಹೇಳಿದರೆ ಸಮಸ್ಯೆ ಸೃಷ್ಟಿಯಾಗುತ್ತದೆ ಎಂಬ ಆಲೋಚನೆ ಬೇಡ.

ಸುತ್ತಲೂ ನಡೆವ ಯಾವುದೇ ಘಟನೆಗಳ ಬಗ್ಗೆ ಸಾರ್ವಜನಿಕರು ಧೈರ್ಯವಾಗಿ ಮತ್ತು ಮುಕ್ತವಾಗಿ ಹೇಳುವ ಮೂಲಕ ಠಾಣೆಗೆ ಸಾರ್ವಜನಿಕರು ಹತ್ತಿರವಾಗಬೇಕು. ಹೀಗಾಗಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಅಲ್ಲದೆ, ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net