

ಹಗರಿಬೊಮ್ಮನಹಳ್ಳಿ; ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿ ಸೇರಿದ್ದ ಜನಸಂದಣಿಯಲ್ಲಿ 11 ಜನ ಮೃತಪಟ್ಟಿದ್ದಾರೆ.
ಆದರೆ, ಜನಸಂದಣಿ ಹತೋಟಿಗೆ ತರಲು ಶ್ರಮಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದು ರಾಜ್ಯ ಸರ್ಕಾರದ ತಪ್ಪು ನಿರ್ಧಾರ ಎಂದು ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ಟಿ.ವೆಂಕೋಬಪ್ಪ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲೂಕು ಘಟಕ ಹಾಗೂ ಬನ್ನಿಕಲ್ಲು ಗ್ರಾಮ ಘಟಕದಿಂದ ಸಿಎಂ ಸಿದ್ದರಾಮಯ್ಯಗೆ ಬರೆದ ಮನವಿಯನ್ನು ಉಪ ತಹಸೀಲ್ದಾರ್ ಶಿವಕುಮಾರ್‌ಗೌಡಗೆ ಸಲ್ಲಿಸಿ ಶುಕ್ರವಾರ ಮಾತನಾಡಿದರು.
ಈ ಘಟನೆಗೆ ಯಾರು ಹೊಣೆ ಎನ್ನುವ ಪ್ರಶ್ನೆ ಇರುವಾಗಲೇ ಈ ರೀತಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದನ್ನು ನಾವು ಖಂಡಿಸುತ್ತೇವೆ ಎಂದರು.
ವಕೀಲ ಕಾಗಿ ಪ್ರಹ್ಲಾದ್, ಸಂಘದ ಪ್ರಧಾನ ಕಾರ್ಯದರ್ಶಿ ಸೆರೆಗಾರ್ ಹುಚ್ಚಪ್ಪ, ಆರ್‌ಎಸ್‌ಎಸ್‌ಎನ್ ಅಧ್ಯಕ್ಷ ದಾದಮ್ಮನವರ ಬಸವರಾಜ, ತಾಪಂ ಮಾಜಿ ಸದಸ್ಯರಾದ ದೇವೇಂದ್ರಪ್ಪ, ಮಾಳಿಗಿ ಗಿರೀಶ, ಪ್ರಮುಖರಾದ ಡಾ.ಹನುಮಂತಪ್ಪ ಕೆಚ್ಚಿನಬಂಡಿ, ಮಗಿಮಾವಿನಗಳ್ಳಿ ಹುಡುಚಪ್ಪ, ಹುಲ್ಮನಿ ಮಂಜುನಾಥ, ವಿ.ರಾಮಣ್ಣ, ಪೇಂಟರ್ ಕೊಟ್ರೇಶ, ಕಾಗಿ ಅಂಬಣ್ಣ, ಜೆ.ಮಾರುತಿ, ಬಿ.ಮಂಜುನಾಥ, ಅಂಬಣ್ಣ, ವಕೀಲರಾದ ರಮೇಶ, ದಾದಮ್ಮನವರ ಮಂಜುನಾಥ, ನಿವೃತ್ತ ಶಿಕ್ಷಕರಾದ ರಾಮಪ್ಪ ಹಾಗೂ ಪ್ರಹ್ಲಾದ್ ಇತರರಿದ್ದರು.