ಮಹಾರಾಷ್ಟ್ರದಲ್ಲಿ ಕರ್ನಾಟಕ ಮೂಲದ ಸ್ವಾಮೀಜಿ ಹತ್ಯೆ, ಮಠಕ್ಕೆ ಕನ್ನ ಹಾಕಿದವರಿಂದ ಕೊಲೆ ಶಂಕೆ

24052020 Sri Rudra Pashupati Swamiji
Published on

ಹಗರಿಬೊಮ್ಮನಹಳ್ಳಿ: ಕರ್ನಾಟಕ ಮೂಲದ ಸ್ವಾಮೀಜಿಯೊಬ್ಬರನ್ನು ಮಹಾರಾಷ್ಟ್ರದಲ್ಲಿ ಶನಿವಾರ ತಡರಾತ್ರಿ ಹತ್ಯೆ ಮಾಡಲಾಗಿದೆ. ಮಹಾರಾಷ್ಟ್ರದ ನಾಂದೇಡ ಜಿಲ್ಲೆ ಉಮರಿ ತಾಲೂಕು ನಾಗಾಠಾಣೆ ನಿರ್ವಾಣಿ ಮಠದ ಪೀಠಾಧಿಪತಿ ಶ್ರೀ ರುದ್ರ ಪಶುಪತಿ ಶಿವಾಚಾರ್ಯ ಮಹಾರಾಜ್ (35) ಅವರನ್ನು ಶನಿವಾರ ತಡರಾತ್ರಿ ದುರ್ಷ್ಕಮಿಗಳು ಹತ್ಯೆ ಮಾಡಿದ್ದಾರೆ.

ಇವರು ಮೂಲತಃ ತಾಲೂಕಿನ ನಂದಿಪುರ ಶ್ರೀಕ್ಷೇತ್ರದ ಚರಂತೇಶ್ವರ ಸ್ವಾಮೀಜಿ ಪುತ್ರರು ಹಾಗೂ ನಂದಿಪುರ ಮಠದ ಶ್ರೀ ಮಹೇಶ್ವರ ಸ್ವಾಮೀಜಿಯವರ ಸಹೋದರ. ನಿರ್ವಾಣಿ ಮಠದಲ್ಲಿ ಕಳವಿಗೆ ಬಂದಿದ್ದ ದುಷ್ಕರ್ಮಿಗಳು ಇವರನ್ನು ಹತ್ಯೆ ಮಾಡಿದ್ದಾರೆ ಎಂಬ ಶಂಕೆಯಿದೆ. ಸಹೋದರನ ಹತ್ಯೆ ವಿಷಯ ತಿಳಿಯುತ್ತಿದ್ದಂತೆ ನಂದಿಪುರದ ಮಹೇಶ್ವರ ಸ್ವಾಮೀಜಿ ಮಹಾರಾಷ್ಟ್ರದ ನಾಗಾಠಾಣಕ್ಕೆ ತೆರಳಿದ್ದಾರೆ. ನಿರ್ವಾಣಿ ಪೀಠವು ಉಜ್ಜನಿ ಪೀಠದ ಶಾಖಾ ಮಠವಾಗಿದೆ. ಶ್ರೀ ರುದ್ರ ಪಶುಪತಿ ಶಿವಾಚಾರ್ಯ ಮಹಾರಾಜರಿಗೆ 12 ವರ್ಷಗಳ ಹಿಂದೆ ಕೇದಾರ ಜಗದ್ಗುರು ಶ್ರೀ ಭೀಮಾಶಂಕರ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಪಟ್ಟಾಭಿಷೇಕ ನಡೆಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net