ಒಗ್ಗಟ್ಟಿನ ಹೋರಾಟದಿಂದ ಬೇಡಿಕೆ ಈಡೇರಿಕೆ

hbhalli Govt emplys
ಹಗರಿಬೊಮ್ಮನಹಳ್ಳಿಯಲ್ಲಿ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮವನ್ನು ತಾಪಂ ಇಒ ಡಾ.ಪರಮೇಶ್ವರಪ್ಪ ಉದ್ಘಾಟಿಸಿದರು. ಬಿಇಒ ಮೈಲೇಶ್ ಬೇವೂರ್, ಪ್ರಮುಖರಾದ ಮಲ್ಲಿಕಾರ್ಜುನಗೌಡ, ಎಂ.ಪಿ.ಎಂ. ಮಂಜುನಾಥ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ಏಳನೇ ವೇತನ ಆಯೋಗದ ವರದಿ ಜಾರಿಗಾಗಿ ರಾಜ್ಯಾದ್ಯಂತ ಸರ್ಕಾರಿ ನೌಕರರು ಮಾಡಿದ ಹೋರಾಟದ ಪ್ರತಿಫಲ ಪ್ರತಿಯೊಬ್ಬರಿಗೂ ಲಭಿಸಿದೆ ಎಂದು ತಾಪಂ ಇಒ ಡಾ.ಪರಮೇಶ್ವರಪ್ಪ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಸರ್ಕಾರಿ ನಿವೃತ್ತ ನೌಕರರು ಹಾಗೂ ರಾಜ್ಯಮಟ್ಟದ ಕ್ರೀಡಾಪಟುಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರಾಜ್ಯದ 32 ಇಲಾಖೆಗಳ ನೌಕರರು ಒಗ್ಗಟ್ಟು ಪ್ರದರ್ಶಿಸಿ ಸರ್ಕಾರದ ಮುಂದೆ ಸೌಲಭ್ಯಗಳ ಬೇಡಿಕೆಯನ್ನಿಟ್ಟು ಈಡೇರಿಸಿಕೊಳ್ಳಲು ಸಾಧ್ಯವಾಗಿದೆ. ಹೋರಾಟದಲ್ಲಿ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡಿದ್ದು ಒಂದು ಪ್ರಬಲವಾದ ಸಂಘಟನೆಯ ಸಂಕೇತವಾಗಿತ್ತು ಎಂದರು.

ನೌಕರರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೌಡ, ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನೌಕರರ ಸೇವೆ ಅನನ್ಯವಾಗಿದೆ. ವಿವಿಧ ಇಲಾಖೆಗಳು ಕಟ್ಟುನಿಟ್ಟಾಗಿ ಕಾರ್ಯಪಾಲನೆ, ಅನೇಕ ಜನಪರ ಕೆಲಸಗಳಲ್ಲಿ ಸಹಭಾಗಿತ್ವದಿಂದ ಯೋಜನೆಗಳು ಯಶ ಕಾಣಲು ಪ್ರತಿಯೊಬ್ಬರಿಗೂ ಸಲ್ಲುತ್ತದೆ ಎಂದರು.

ಬಿಇಒ ಮೈಲೇಶ್ ಬೇವೂರ್, ತಾಲೂಕು ವೈದ್ಯಾಧಿಕಾರಿ ಡಾ.ಪ್ರವೀಣ್, ಡಾ.ಅಚ್ಯುತರಾವ್, ಡಾ.ತಿಪ್ಪೇಸ್ವಾಮಿ, ಬಿಸಿಯೂಟದ ಅಧಿಕಾರಿ ರಾಜಕುಮಾರ್, ಕಡ್ಲಿ ವೀರಭದ್ರಪ್ಪ, ಹೊಸಪೇಟೆಯ ಬಸವರಾಜ್, ಎಸ್.ಬಸವರಾಜ್, ನಾಗಭೂಷಣ, ಡಾ.ಸೂರಪ್ಪ, ಜೀವನಗೌಡ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ, ಉಪನ್ಯಾಸಕರ ತಾಲೂಕು ಅಧ್ಯಕ್ಷ ಗೂಳಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net