ಸಮಾಜದ ಸಾಧಕರ ಜೀವನ ದಾರಿದೀಪ

hbhalli kankaan
ಹಗರಿಬೊಮ್ಮನಹಳ್ಳಿಯಲ್ಲಿ ಏರ್ಪಡಿಸಿದ್ದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಉಪನ್ಯಾಸಕ ಮುದ್ದಪ್ಪ, ಪ್ರಾಚಾರ್ಯೆ ಪಲ್ಲವಿ ವೆಂಕಟೇಶ್, ಪ್ರಮುಖರಾದ ಬುಡ್ಡಿ ಬಸವರಾಜ, ಮೈನಳ್ಳಿ ಶಿವರಾಜ, ಬಣಕಾರ್ ಗೋಣೆಪ್ಪ, ಡಾ.ಬಿ.ಚಿದಾನಂದ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ಹಾಲುಮತ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಪ್ರಚುರಪಡಿಸಿದ ಕೀರ್ತಿ ಕುರುಬ ಸಮಾಜದ ಸಾಧಕರಿಗೆ ಸಲ್ಲುತ್ತದೆ ಎಂದು ಕೊಪ್ಪಳದ ಉಪನ್ಯಾಸಕ ಮುದ್ದಪ್ಪ ಹೇಳಿದರು.

ಪಟ್ಟಣದಲ್ಲಿ ಕನಕ ನೌಕರರ ಸಂಘ ಏರ್ಪಡಿಸಿದ್ದ ಹಾಲುಮತ ಸಂಸ್ಕೃತಿ ವೇದಿಕೆಯ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಡಿನ ಎಲ್ಲ ವರ್ಗದವರು ಮೆಚ್ಚುವ ಸಾಹಿತ್ಯವನ್ನು ಕುರುಬ ಸಮಾಜದ ಭಂಡಾರ ನೀಡಿದೆ. ಮಹಾನ್ ಸಾಧಕರ ಜೀವನಗಾಥೆಗಳು ನಮಗೆ ದಾರಿದೀಪವಾಗಿವೆ ಎಂದರು.

ಪ್ರಾಚಾರ್ಯೆ ಪಲ್ಲವಿ ವೆಂಕಟೇಶ್ ಮಾತನಾಡಿ, ಹಾಲುಮತ ಸಮಾಜದ ಕನಕದಾಸ, ಸಜ್ಜಲಗುಡ್ಡದ ಶರಣಮ್ಮ, ಇಟಗಿ ಭೀಮಾಂಬಿಕೆ, ಸಂಗೊಳ್ಳಿ ರಾಯಣ್ಣ ಚರಿತ್ರೆಗಳು ನಮ್ಮ ಸಮಾಜದ ಹಿರಿಮೆಗೆ ಹೆಗ್ಗುರುತಾಗಿವೆ ಎಂದರು.

ಜಿಲ್ಲಾ ಕುರುಬರ ಸಂಘದ ಸಂಚಾಲಕ ಬುಡ್ಡಿ ಬಸವರಾಜ, ತಾಲೂಕು ಅಧ್ಯಕ್ಷ ಮೈನಳ್ಳಿ ಶಿವರಾಜ, ಧರ್ಮದರ್ಶಿ ಬಣಕಾರ್ ಗೋಣೆಪ್ಪ, ಪಶು ವೈದ್ಯಾಧಿಕಾರಿ ಬಿ.ಚಿದಾನಂದ, ಶಿಕ್ಷಕರಾದ ಮಲ್ಲಯ್ಯ, ಉಡೆದಪ್ಪ, ರಮೇಶ್, ಎಂ.ಎಸ್.ಕಲ್ಗುಡಿ, ಮೂರ್ನಾಳ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net