

ಹಗರಿಬೊಮ್ಮನಹಳ್ಳಿ: ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದ ತಾಲೂಕಿನ ಕನ್ನಿಹಳ್ಳಿಯ ವಿದ್ಯಾರ್ಥಿನಿ ನಿರ್ಮಲಗೆ ತಾಲೂಕು ಕುರುಬ ಸಂಘದಿಂದ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.
ಸಂಘದ ವಿಜಯನಗರ ಜಿಲ್ಲಾ ಸಂಚಾಲಕ ಬುಡ್ಡಿ ಬಸವರಾಜ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಪೈಪೋಟಿ ನೀಡುತ್ತಿದ್ದಾರೆ. ಈ ಸಾಲಿನಲ್ಲಿ ವಿದ್ಯಾರ್ಥಿನಿ ನಿರ್ಮಲಾ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಕನ್ನಿಹಳ್ಳಿ ಗ್ರಾಮದ ಹೆಸರನ್ನು ಇಡೀ ರಾಜ್ಯಕ್ಕೆ ಪರಿಚಯಿಸಿ, ವಿದ್ಯಾರ್ಥಿ ಸಮೂಹಕ್ಕೆ ಮಾದರಿಯಾಗಿದ್ದಾರೆ ಎಂದರು.
ಕುರುಬ ಸಂಘದ ತಾಲೂಕು ಅಧ್ಯಕ್ಷ ಎಂ.ಶಿವರಾಜ, ಜಿಲ್ಲಾ ನಿರ್ದೇಶಕ ಪ್ರಕಾಶ್, ಜಿ.ಪಂ.ಮಾಜಿ ಸದಸ್ಯ ಸೋಮಲಿಂಗಪ್ಪ, ಪ್ರಮುಖರಾದ ಕೊಟ್ರಯ್ಯ ಒಡೆಯರ್, ಕೋಟೆಪ್ಪ, ಚಂದ್ರಪ್ಪ, ಅಜ್ಜಪ್ಪ, ರವಿ, ಗುಡ್ಡಪ್ಪ, ಕರಿಯಪ್ಪ, ನೀಲಪ್ಪ, ಹನುಮಂತಪ್ಪ, ದುರ್ಗಪ್ಪ, ಜಗದೀಶ ಇತರರಿದ್ದರು.