

ಹಗರಿಬೊಮ್ಮನಹಳ್ಳಿ: ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ರಾಷ್ಟ್ರೀಯ ಆವಿಷ್ಕಾರ ಸಪ್ತಾಹದ ಅಂಗವಾಗಿ ಶಾಲಾ ಹಂತದ ವಿಜ್ಞಾನ ವಸ್ತು ಪ್ರದರ್ಶನವನ್ನು ಶುಕ್ರವಾರ ಏರ್ಪಡಿಸಲಾಗಿತ್ತು.
ಬಿಇಒ ಮೈಲೇಶ್ ಬೇವೂರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಬೇಕು. ಹಾಗೆಯೇ ಹೊಸ ಅವಿಷ್ಕಾರಗಳನ್ನು ಕಂಡುಹಿಡಿಯುವ ಪ್ರಯತ್ನ ಮಾಡಿದಾಗಲೇ ಯಶಸ್ಸು ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ವಿ.ಮಲ್ಲಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳು ತಯಾರಿಸಿದ ಸುಮಾರು 70ಕ್ಕೂ ಹೆಚ್ಚು ಮಾದರಿಗಳು ಪ್ರದರ್ಶನಗೊಂಡವು. ಆರೋಗ್ಯ ಇಲಾಖೆಯಿಂದ ವಿದ್ಯಾರ್ಥಿಗಳ ರಕ್ತದ ಗುಂಪು ಪರೀಕ್ಷೆ ಮಾಡಿಸಲಾಯಿತು.
ಎಸ್ಡಿಎಂಸಿ.ಅಧ್ಯಕ್ಷ ವಿ.ಹುಲುಗಪ್ಪ, ಉಪಾಧ್ಯಕ್ಷೆ ಪ್ರಿಯಾಂಕ, ಸದಸ್ಯರಾದ ಶ್ರೀನಿವಾಸ, ಪರಶುರಾಮ, ಶಾಬುದ್ದೀನ್, ರೇಣುಕಮ್ಮ, ಶೈನಾಜ್, ಹುಲಿಗೆಮ್ಮ, ಶಿಕ್ಷಣ ಸಂಯೋಜಕ ಶಿವಲಿಂಗ ಸ್ವಾಮಿ, ಗುರುಬಸವರಾಜ, ಶಿಕ್ಷಕರಾದ ಎಚ್.ಕುಮಾರ, ಕೆ.ಜನಾರ್ದನ, ವನಿತಾ ಪಿ.ಸೊಪ್ಪಿಮಠ, ದೈಹಿಕ ಶಿಕ್ಷಣ ಪರಿವೀಕ್ಷಕ ಸೋಮಪ್ಪ, ಡಿ.ವೆಂಕಟೇಶ ನಾಯ್ಕ, ಮಲ್ಲೇಶ್ ನಾಯ್ಕ ಇತರರಿದ್ದರು.