

ಹಗರಿಬೊಮ್ಮನಹಳ್ಳಿ: ಕಾರ್ತಿಕ ಮಾಸದಲ್ಲಿ ನಡೆಯುವ ಕಾರ್ತಿಕೋತ್ಸವ ಧಾರ್ಮಿಕ ಆಚರಣೆಗಳು ನಾಟಕ, ರಂಗಕಲೆಗಳಿಗೆ ಆದ್ಯತೆ ನೀಡಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಿದೆ ಎಂದರು ನೀರಾವರಿ ಆಂಜನೇಯ ಸ್ವಾಮಿ ಸೇವಾ ಸಮಿತಿ ಗೌರವ ಅಧ್ಯಕ್ಷ ಇ.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಹಳೇ ಹಬೊ ಹಳ್ಳಿಯ ನೀರಾವರಿ ಇಲಾಖೆ ಆವರಣದಲ್ಲಿ ಶ್ರೀಆಂಜನೇಯ ಸ್ವಾಮಿ ಕಾರ್ತಿಕೋತ್ಸವದಲ್ಲಿ ಏರ್ಪಡಿಸಿದ್ದ ರಂಗಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ತಿಕ ಮಾಸದಲ್ಲಿ ಪ್ರತಿವರ್ಷ ಶಿವಸಂಚಾರ ಸಾಣೆಹಳ್ಳಿ ರಂಗತಂಡದಿಂದ ಮೂರು ದಿನಗಳ ಕಾಲ ನಾಟಕಗಳನ್ನು ಏರ್ಪಡಿಸಿ ರಂಗಕಲೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಬಾರಿಯು ಬಿಜ್ಜಳ ನ್ಯಾಯ, ನೆಮ್ಮದಿ ಅಪಾರ್ಟಮೆಂಟ್, ಚಂದ್ರಹಾಸ ನಾಟಕಗಳನ್ನು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಬಾಣ ಬಿರುಸಿನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.
ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ಹೂವಿನಹಡಗಲಿ ತಹಸೀಲ್ದಾರ ಕೆ.ಶರಣಮ್ಮ, ಸತ್ಸಂಗ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀಪತಿ ಮಾತನಾಡಿದರು. ಈ ವೇಳೆ ಸಮಿತಿಯ ಅಧ್ಯಕ್ಷ ಕಲಾಲ್ ಪ್ರಭಾಕರ, ಎಚ್.ಎಂ.ನಾಗರಾಜ್, ನೀಲಕಂಠಪ್ಪ, ಕೃಷಿಕ ಸಮಾಜದ ಅಧ್ಯಕ್ಷ ದೇವರಾಜ್, ಶ್ರೀಶೈಲಸ್ವಾಮಿ, ಹುರುಕಡ್ಲಿ ಶಿವಕುಮಾರ್, ಹನಸಿ ಉಮಾಪತಿ ಇತರರಿದ್ದರು.