ಅಯೋಧ್ಯೆ ರಾಮ ಮಂದಿರ ಮಾದರಿ ನಿರ್ಮಾಣ

HBH 1
ಹಗರಿಬೊಮ್ಮನಹಳ್ಳಿ ಕನ್ಯಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಿದ ಗಣೇಶನ ಮೂರ್ತಿಯ ಮುಂಭಾಗದಲ್ಲಿ ಅಯೋಧ್ಯೆ ರಾಮಮಂದಿರ ಮಾದರಿ ನಿರ್ಮಿಸಲಾಗಿದೆ.
Published on

ಹಗರಿಬೊಮ್ಮನಹಳ್ಳಿ: ಪಟ್ಟಣದ ಹಿಂದು ಮಹಾಗಣಪತಿ ಸಮಿತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು, ರಕ್ತದಾನ ಶಿಬಿರ, ಧರ್ಮಜಾಗೃತಿ ಸಮಾವೇಶ ಆಯೋಜಿಸಲಾಗಿದೆ.

ಕೂಡ್ಲಿಗಿ ವೃತ್ತದಲ್ಲಿ ಬೆನಕನ ಗ್ರೂಪ್‌ನಿಂದ ಅಯೋಧ್ಯೆ ರಾಮಮಂದಿರ ಮುಂಭಾಗದ ಮಾದರಿ ನಿರ್ಮಿಸಲಾಗಿದೆ. ಏಕದಂತ ಗ್ರೂಪ್‌ನಿಂದ ಪ್ರತಿಷ್ಠಾಪಿಸಿರುವ ಗಣೇಶ ಸ್ಥಳದಲ್ಲಿ ಒಂಬತ್ತನೇ ದಿನ ಬೆಂಗಳೂರಿನ ತಂಡದಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕನ್ಯಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣೇಶ ಮೂರ್ತಿಯನ್ನು ಮುತ್ತುಗಳಿಂದ ನಿರ್ಮಿಸಲಾಗಿದೆ. ರೈತರ ಓಣಿಯ ಶ್ರೀದುರ್ಗಾ ಮಾರುತಿ ಗರುಡಿ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಲ್ಪಟ್ಟ ಗಣೇಶನ ಮೂರ್ತಿ, ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆತನ್ನಿ ಎನ್ನುವ ಸಂದೇಶ ತಿಳಿಸುತ್ತಿದೆ.

ರಾಮನಗರದ ಗುರುಭವನದಲ್ಲಿ ಶ್ರೀ ಮಾರುತಿ ಸ್ಪೋರ್ಟ್ಸ್ ಕ್ಲಬ್, ಜ್ಯೋತಿ ವೃಂದ, ವೀರರಾಣಿ ಕಿತ್ತೂರ ಚನ್ನಮ್ಮ ವೃತ್ತ, ಶ್ರೀ ಕಲ್ಲೇಶ್ವರ ದೇಗುಲದಲ್ಲಿ ಗೊಲ್ಲರ ಓಣಿಯ ಯುವಕರು, ಆಂಜನೇಯ ದೇಗುಲದ ಹತ್ತಿರ, ಜೆ.ಜೆ.ನಗರ ಹಾಗೂ ಅಂಬಾಭವಾನಿ ದೇಗುಲದಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಸಿಸಿ ಕ್ಯಾಮರಾ ಅಳವಡಿಕೆ: ಪಟ್ಟಣದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಅಹಿತಕರ ಘಟನೆಗಳು ನಡೆಯಬಾರದು ಎಂದು ಪುರಸಭೆ ಸಹಯೋಗದಲ್ಲಿ ಪೊಲೀಸ್ ಇಲಾಖೆಯಿಂದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಬಸವೇಶ್ವರ ಬಜಾರ, ರೈಲ್ವೆಗೇಟ್, ಹಳೇ ಊರಿನ ಬಸ್ ನಿಲ್ದಾಣ, ಗ್ರಾಪಂ, ಕಿತ್ತೂರುರಾಣಿ ಚನ್ನಮ್ಮ ವೃತ್ತ, ತಂಬ್ರಹಳ್ಳಿ ರಸ್ತೆ, ಹಾಲಸ್ವಾಮಿ ಮಠ, ರಾಮನಗರ ಬಾವಿಹತ್ತಿರ ಹಾಗೂ ಮಾಲವಿ ಜಲಾಶಯದ ಬಳಿ ಸೇರಿ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಸಿಪಿಐ ವಿಕಾಸ್ ಲಮಾಣಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net