

ಹಗರಿಬೊಮ್ಮನಹಳ್ಳಿ: ಪಟ್ಟಣದ ಹರಿಹರ ರಸ್ತೆಯ ಹೊರವಲಯದಲ್ಲಿರುವ ತಂಬ್ರಹಳ್ಳಿ ಠಾಣೆ ಮುಖ್ಯಪೇದೆ ರವೀಶ್ ಮೇಟಿ ಮನೆಯಲ್ಲಿ ಮೂರು ತಿಂಗಳ ಹಿಂದೆ ಚಿನ್ನಾಭರಣ ಕದ್ದು ತಲೆಮರೆಸಿಕೊಂಡಿದ್ದ ಕಳ್ಳನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣ ಮತ್ತು ಕೊಟ್ಟೂರಿನಲ್ಲಿ ಕಳ್ಳತನ ಮಾಡಿದ್ದ ಬಳ್ಳಾರಿಯ ಎಚ್.ಹನುಮಂತ ಬಂಧಿತ. ಆತನಿಂದ 5.15 ಲಕ್ಷ ರೂ. ಮೌಲ್ಯದ ನಾಲ್ಕು ಚಿನ್ನದ ಬಳಕೆ, 3 ಜತೆ ಬೆಂಡೋಲೆ, 2 ಉಂಗುರ, ಒಂದು ಮಾಂಗಲ್ಯ ಸರ, ಒಂದು ಸರ ಜಪ್ತಿ ಮಾಡಲಾಗಿದೆ.
ಪಟ್ಟಣ ಹಾಗೂ ಕೊಟ್ಟೂರಿನಲ್ಲಿ ನಡೆದ ಕಳವು ಪ್ರಕರಣ ಬೇಧಿಸಲು ಎಸ್ಪಿ ಶ್ರೀಹರಿಬಾಬು, ಎಎಸ್ಪಿ, ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಮಾರ್ಗದರ್ಶನದಲ್ಲಿ ರಚಿಸಿದ ಹಬೊಹಳ್ಳಿ ಸಿಪಿಐ ವಿಕಾಸ್ ಲಮಾಣಿ, ಪಿಎಸ್‌ಐ ಬಸವರಾಜ್ ಅಡವಿಬಾವಿ, ಜಿ.ಕೆ.ಅಬ್ಬಾಸ್, ಕೊಟ್ಟೂರಿನ ಸಿಪಿಐ ವೆಂಕಟಸ್ವಾಮಿ, ಪಿಎಸ್‌ಐ ಗೀತಾಂಜಲಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.