ಅಧಿವೇಶನದಲ್ಲಿ ರೈತರ ಸಮಸ್ಯೆ ಚರ್ಚಿಸಿ

HB Halli Organations Appal Session
ಹಗರಿಬೊಮ್ಮನಹಳ್ಳಿ ಉಪತಹಸೀಲ್ದಾರ ವಿಶ್ವೇಶರಯ್ಯಗೆ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು. ಪ್ರಮುಖರಾದ ಮೈನಳ್ಳಿ ಕೊಟ್ರೇಶಪ್ಪ, ಹತ್ತಿ ಅಡಿವೆಪ್ಪ, ರಮೇಶ ಪೂಜಾರ ಇದ್ದರು.
Published on

ಹಗರಿಬೊಮ್ಮನಹಳ್ಳಿ: ರಾಜ್ಯದ ರೈತರು ಸಂಕಷ್ಟದಲ್ಲಿ ಇರುವುದನ್ನು ಜನಪ್ರತಿನಿಧಿಗಳು ಅರಿತು ಅಧಿವೇಶನದಲ್ಲಿ ಚರ್ಚಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆದರು.

ಎಪಿಎಂಸಿ ನಿರ್ದೇಶಕ ಮೈನಳ್ಳಿ ಕೊಟ್ರೇಶಪ್ಪ ಮಾತನಾಡಿ, ವಿಪರೀತ ಮಳೆಯಿಂದಾಗಿ ಬೆಳೆಗಳು ಹಾನಿಯಾಗಿವೆ. ಪ್ರಸ್ತುತ ಅಧಿವೇಶನದಲ್ಲಿ ಶಾಸಕರು ಆಯಾ ಕ್ಷೇತ್ರಗಳ ರೈತ ಸಂಕಷ್ಟಗಳನ್ನು ಅರಿತು ಪರಿಹಾರಕ್ಕಾಗಿ ಚರ್ಚಿಸಬೇಕು. ಶೀಘ್ರವೇ ರೈತ ಸಾಲ ಮನ್ನಾ, ಬೆಳೆ ವಿಮೆ, ನಷ್ಟ ಪರಿಹಾರ, ಬೆಂಬಲ ಬೆಲೆ ನೀಡುವತ್ತ ಕ್ರಮವಹಿಸಬೇಕಿದೆ ಎಂದರು. ಪ್ರಮುಖರಾದ ರಮೇಶ ಪೂಜಾರ, ಜೆ.ಯೋಗಾನಂದ, ಮರಿಯಪ್ಪ, ಟಿ.ಯೋಗೇಶ, ಹತ್ತಿ ಅಡಿವೆಪ್ಪ, ಕೆ.ಮಾರುತೆಪ್ಪ, ಕೃಷ್ಣಾಪುರ ಎನ್.ದೊಡ್ಡಬಸಪ್ಪ, ಕೆಚ್ಚಿನಬಂಡಿ ದುರುಗಪ್ಪ, ವಿ.ರಾಮಾಂಜನೇಯ, ಯಮುನಪ್ಪ, ಸಣ್ಣ ಹನುಮಂತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net