

ಹಗರಿಬೊಮ್ಮನಹಳ್ಳಿ: ಸರ್ಕಾರಿ ಶಾಲೆಗಳು ಬಡವರ ಮಕ್ಕಳ ಪಾಲಿಗೆ ಆಶಾಕಿರಣ ಎಂದು ಪುರಸಭೆ ಅಧ್ಯಕ್ಷ ಮರಿ ರಾಮಪ್ಪ ಹೇಳಿದರು.
ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಪಟ್ಟಣದ ರಾಮನಗರದ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಮಕ್ಕಳನ್ನು ಪ್ರೀತಿಯಿಂದ ಕಂಡಾಗ ಕಲಿಕೆಗೆ ಪೂರಕವಾಗಲಿದೆ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಬಿಇಒ ಮೈಲೇಶ್ ಬೇವೂರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ಉಚಿತ, ಗುಣಾತ್ಮಕ ಖಚಿತವಾಗಿ ಸಿಗಲಿದೆ. ಇದಕ್ಕೆ ಸರ್ಕಾರಿ ಪ್ರಮುಖ ಹುದ್ದೆಗಳಲ್ಲಿರುವವರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದವರು. ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದರು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಹುಲುಗಪ್ಪ, ಉಪಾಧ್ಯಕ್ಷೆ ಪ್ರಿಯಾಂಕಾ, ಹಳೇ ಊರಿನ ಸ.ಮಾ.ಹಿ.ಪ್ರಾ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮಜ್ಗಿ ವೀರೇಶ, ರಾಮನಗರ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಶಾಬುದ್ದೀನ್, ಪ್ರಮುಖರಾದ ಸೆರೆಗಾರ ಹುಚ್ಚಪ್ಪ, ಉಪ್ಪಾರ ಹನುಮಂತ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹ್ಯಾಟಿ ಲೋಕಪ್ಪ, ಬಿಸಿಯೂಟ ಅಧಿಕಾರಿ ರಾಜಕುಮಾರನಾಯ್ಕ, ಪ್ರೌಢಶಾಲೆಯ ಮುಖ್ಯಶಿಕ್ಷಕ ಮಲ್ಲಪ್ಪ, ಸಮಾಹಿಪ್ರಾ ಶಾಲೆಯ ಮುಖ್ಯಶಿಕ್ಷಕ ವೀರನಗೌಡ, ಡಿಆರ್‌ಪಿ ಪರಮೇಶ್ವರ ಸೊಪ್ಪಿಮಠ, ಎಲ್ಲ ಸಿಆರ್‌ಪಿ ಅಧಿಕಾರಿಗಳಿದ್ದರು. ಶಿಕ್ಷಕಿ ಗೀತಾ ಪ್ರಾರ್ಥಿಸಿದರು, ಸಿಆರ್‌ಪಿಯ ಗೌರಮ್ಮ, ಶಿಕ್ಷಕಿ ಎಚ್.ಎಂ.ವನಿತಾ ನಿರ್ವಹಿಸಿದರು.