ಬಾಕಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷೃ - ದೂರಿದ ಪುರಸಭೆ ಸದಸ್ಯರು

hbh-2
ಹಗರಿಬೊಮ್ಮನಹಳ್ಳಿ ಪುರಸಭೆಯ 2025-26ನೇ ಸಾಲಿನ ಬಜೆಟ್ ಪೂರ್ವಸಿದ್ಧತಾ ಸಭೆಯಲ್ಲಿ ಅಧ್ಯಕ್ಷ ಮರಿರಾಮಪ್ಪ ಮಾತನಾಡಿದರು. ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರ ಹಾಗೂ ಮುಖ್ಯಾಧಿಕಾರಿ ಎಂ.ಕೆ.ಮುಗುಳಿ ಇದ್ದರು.
Published on

ಹಗರಿಬೊಮ್ಮನಹಳ್ಳಿ: ಪುರಸಭೆಯಲ್ಲಿ ಅಧ್ಯಕ್ಷ ಮರಿರಾಮಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಬಜೆಟ್ ಪೂರ್ವಭಾವಿ ಸಭೆ ನಡೆಯಿತು. ಸದಸ್ಯರ ಆಸ್ತಿ ಗಳಿಕೆ ಬಗ್ಗೆ ಚರ್ಚೆಯಾಗಿ, ಸಭೆ ವಿಷಯಾಂತರವಾಯಿತು.

ಅಧ್ಯಕ್ಷ ಮರಿರಾಮಪ್ಪ ಮಾತನಾಡಿ, 2025-26ನೇ ಸಾಲಿಗೆ 15ನೇ ಹಣಕಾಸು, ಪುರಸಭೆಯ ವಿವಿಧ ಶುಲ್ಕಗಳು, ತೆರಿಗೆ ಸೇರಿದಂತೆ ಇತರ ಮೂಲಗಳಿಂದ 4.06 ಕೋಟಿ ರೂ. ಬಜೆಟ್ ಮಂಡನೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಈ ಅನುದಾನದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಮತ್ತು ಬಜೆಟ್‌ನಲ್ಲಿ ಕಾಮಗಾರಿ ಸೇರ್ಪಡೆ ಮಾಡುವ ಬಗ್ಗೆ ಬಗ್ಗೆ ಚರ್ಚಿಸಬೇಕೆಂದು ಕೋರಿದರು.

ಕಮಲಮ್ಮ ಶಿವಮೊಗ್ಗ ಹಾಗೂ ಮಲ್ಲೇಶ್ವರಿ ಈ.ಭರತ್ ಮಾತನಾಡಿ, ಬಾಕಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷೃ ವಹಿಸಿದ್ದಾರೆ ಎಂದು ದೂರಿದರು. ಕೆಲ ಸದಸ್ಯರು ಸ್ಮಶಾನಗಳ ಸ್ವಚ್ಛತೆ ಬಗ್ಗೆ ಪ್ರಸ್ತಾಪಿಸಿದರು. ನಂತರ ಸದಸ್ಯರ ಆಸ್ತಿ ಗಳಿಕೆ ಬಗ್ಗೆ ಚರ್ಚೆ ಆಯಿತು. ದೀಪಕ್ ಕಠಾರೆ ಮಾತನಾಡಿ, ಹಳೇ ಊರಿನ ಪಿಎಲ್‌ಡಿ ಬ್ಯಾಂಕ್ ಮುಂಭಾಗದಿಂದ ಪಟ್ಟಣದ ಹೊರವಲಯದವರೆಗಿನ ರಸ್ತೆಯೂ ದುರಸ್ತಿ ಆಗಬೇಕಿದೆ ಎಂದು ಒತ್ತಾಯಿಸಿದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಮರಿರಾಮಪ್ಪ ತಿಳಿಸಿದರು.

ಜೋಗಿ ಹನುಮಂತಪ್ಪ ಮಾತನಾಡಿ, ಬಸವೇಶ್ವರ ಬಜಾರದ ಡಿವೈಡರ್ ಅವೈಜ್ಞಾನಿಕ ನಿರ್ಮಾಣವಾಗಿದೆ ಎಂದು ತಿಳಿಸಿದರು. ನವೀನ್ ಕುಮಾರ್ ಹಾಗೂ ನಾಗರಾಜ್ ಜನ್ನು ಧ್ವನಿಗೂಡಿಸಿ ಆ ಡಿವೈಡರ್ ಗ್ರಿಲ್‌ಗಳನ್ನು ಬದಲಿಸಿ, ಸ್ವಲ್ಪ ಎತ್ತರಿಸಿ ಗಿಡಗಳನ್ನು ಬೆಳಸಬೇಕು, ಜಾಹೀರಾತು ಫಲಕಗಳನ್ನು ಅಳವಡಿಸಿ ಆದಾಯದ ಮೂಲ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಪರಿಶೀಲಿಸುವುದಾಗಿ ಅಧ್ಯಕ್ಷ ಭರವಸೆ ನೀಡಿದರು.

ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರ, ಮುಖ್ಯಾಧಿಕಾರಿ ಎಂ.ಕೆ.ಮುಗುಳಿ, ಮ್ಯಾನೇಜರ್ ಚಂದ್ರಶೇಖರ, ಸಂಘ-ಸಂಸ್ಥೆಗಳ ಪದಧಿಕಾರಿಗಳು, ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net