ಬಿಡಿಸಿಸಿ ಬ್ಯಾಂಕ್ ಸಾಲ ಸೌಲಭ್ಯ ಪಡೆಯಿರಿ

H b halli Sanjeevini Mahila Union building open
ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೆರೆಯಲ್ಲಿ ಸೂರ್ಯೋದಯ ಸಂಜೀವಿನಿ ಮಹಿಳಾ ಒಕ್ಕೂಟದ ಕಟ್ಟಡವನ್ನು ಹೂವಿನಹಡಗಲಿ ಶಾಸಕ ಕೃಷ್ಣಾನಾಯ್ಕ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ರಾಮಪ್ಪ ಛಲವಾದಿ, ಪ್ರಮುಖರಾದ ಎಚ್.ಜಿ.ಬಸವನಗೌಡ್ರು, ಮೇಗೇರಿ ರಾಮರೆಡ್ಡಿ, ಮೇಗೇರಿ ಶೇಖರಪ್ಪ, ತಿಪ್ಪಾರೆಡ್ಡಿ ಅಡಿವೆಪ್ಪ, ಶಿವರೆಡ್ಡಿಬಸವರೆಡ್ಡಿ, ಟಿ.ಗಿರಿರಾಜರೆಡ್ಡಿ, ನಂದಿಹಳ್ಳಿ ನಾಗರಾಜ್ ಇದ್ದರು.
Published on

ಹಗರಿಬೊಮ್ಮನಹಳ್ಳಿ: ಮಹಿಳೆಯರು ಸ್ವಾವಲಂಬಿ ಗಳಾಗಲು ಗುಡಿ ಕೈಗಾರಿಕೆ ಸಹಕಾರಿ ಎಂದು ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ ಹೇಳಿದರು.

ತಾಲೂಕಿನ ಗದ್ದಿಕೆರೆ ಗ್ರಾಪಂನಲ್ಲಿ ಸೂರ್ಯೋದಯ ಸಂಜೀವಿನಿ ಮಹಿಳಾ ಒಕ್ಕೂಟದ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಅನೇಕ ಸಂಘಗಳಲ್ಲಿ ಸಾಲ ಮಾಡಿ, ಸ್ವಂತ ಬದುಕು ಕಟ್ಟಿಕೊಳ್ಳಲು ಹೋಗಿ ಸಾಲ ತೀರಿಸಲಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಅತ್ಯಂತ ಕಡಿಮೆ ಬಡ್ಡಿಯಲ್ಲಿ ಬಿಡಿಸಿಸಿ ಬ್ಯಾಂಕ್‌ನಲ್ಲಿ ಮಹಿಳಾ ಸಂಘಕ್ಕೆ ಸಾಲ ನೀಡುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು. ವರುಣನ ಕೃಪೆಯಿಂದ ಕ್ಷೇತ್ರದೆಲ್ಲೆಡೆ ಉತ್ತಮ ಮಳೆಯಾಗಿದ್ದು, ಬಹುತೇಕ ಹಳ್ಳಕೊಳ್ಳ, ಕೆರೆಗಳು ಭರ್ತಿಯಾಗಿ ರೈತರಿಗೆ ಅನುಕೂಲವಾಗಲಿದೆ ಎಂದರು.

ನಂತರ ಜಿ.ಕೋಡಿಹಳ್ಳಿ ಕೆರೆಗೆ ಬಾಗಿನ ಅರ್ಪಿಸಲಾಯಿತು. ಡಾ.ಮಹೇಶ್ವರ ಸ್ವಾಮೀಜಿ, ಗದ್ದಿಕೆರೆ ಚರಂತೇಶ ಸ್ವಾಮೀಜಿ, ಬೆಣ್ಣಿಹಳ್ಳಿ ಪಂಚಾಕ್ಷರಿ ಶಿವಾಚಾರ್ಯರು, ಸಂಡೂರಿನ ಕೃಷ್ಣಪಾದ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ ರಾಮಪ್ಪ ಛಲವಾದಿ, ಗ್ರಾಪಂ ಸದಸ್ಯರ ಒಕ್ಕೂಟದ ಅಧ್ಯಕ್ಷೆ ಟಿ.ಮಮತಾ, ಮುಖ್ಯಶಿಕ್ಷಕ ನಾಗೇಂದ್ರಪ್ಪ, ನರೇಗಾ ಎಡಿ ರಮೇಶ್ ಮಹಾಲಿಂಗಪುರ, ಪಿಡಿಒ ಮಲ್ಲೇಶನಾಯ್ಕ, ಸದಸ್ಯರಾದ ಸುರೇಶ್ ಪೂಜಾರ್, ಬಸಮ್ಮ ಎಚ್. ದೊಡ್ಡಬಸಪ್ಪ, ಗಡ್ಡಿ ಶೋಭಾ ತೋಟಜ್ಜ, ಅಂಜಿನಮ್ಮ ದುರುಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net