ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ

Published on

ಹಗರಿಬೊಮ್ಮನಹಳ್ಳಿ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದು ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.

ತಾಲೂಕಿನ ವಲ್ಲಭಾಪುರ ಗ್ರಾಮದಲ್ಲಿ 43.5 ಲಕ ್ಷರೂ. ಅನುದಾನದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದ ಬಹುತೇಕ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಅದಕ್ಕೆ ಕ್ಷೇತ್ರಕೂಡ ಹೊರತಾಗಿಲ್ಲ. ಆದರೆ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮಾನ್ಯತೆ ನೀಡಲಾಗುತ್ತಿದೆ. ಕೆಕೆಆರ್‌ಡಿಬಿ. ಅನುದಾನ ಬಳಸಿಕೊಂಡು ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ ಎಂದರು.

ನಂತರ ವಲ್ಲಭಾಪುರದಲ್ಲಿ ನರೇಗಾ ಯೋಜನೆಯ 7.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಸರ್ಕಾರಿ ಶಾಲೆಯ ಅಡುಗೆ ಕೋಣೆ ಉದ್ಘಾಟನೆ, ವರಲಹಳ್ಳಿಯಲ್ಲಿ 52.33 ಲಕ್ಷ ರೂ.ಗಳ ವೆಚ್ಚದಲ್ಲಿ ಸಿ.ಸಿ ರಸ್ತೆ, ಕೋಗಳಿ ತಾಂಡಾದಲ್ಲಿ 1.08 ಕೋಟಿ ರೂ.ಗಳ ವೆಚ್ಚದ ಸಿ.ಸಿ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಚಾಲನೆ ನೀಡಿದರು.

ವಲ್ಲಾಭಾಪುರ ಗ್ರಾಪಂ ಸದಸ್ಯರಾದ ಕೆ.ಎಂ ಚೈತ್ರಾ ಮಲ್ಲಿಕಾರ್ಜುನ, ಡಾಣಿ ರೇಖಾ ಸುರೇಶ್, ದೊಡ್ಡ ಹುಲುಗುಪ್ಪ, ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ, ಭೋವಿ ಬಸವರಾಜ್, ಬೆಟ್ಟಪ್ಪ, ಡಾಣಿ ಸುರೇಶ್, ಮಲ್ಲಿಕಾರ್ಜುನ, ಹನುಮಂತಪ್ಪ, ಅಂಬರೀಶಪ್ಪ, ವಿ.ಕಾಳೇಶ, ಎನ್.ಎಂ.ನಾಗರಾಜ, ಅಳವಂಡಿ ಕೊಟ್ರೇಶ, ಎಚ್.ಎಂ ನಾಗರಾಜಯ್ಯ, ಜಿ.ಹನುಮಂತ ಶಿವಕುಮಾರ ಶೆಟ್ರು, ಯು.ಕೊಟ್ಟಪ್ಪ, ನರಸಯ್ಯ, ಒ.ಎಂ ಶರಣಬಸವ, ನರೇಗಾ ಯೋಜನಾಧೀಕಾರಿ ರಮೇಶ ಮಹಾಲಿಂಗಪುರ, ಬ್ಯಾಟಿ ನಾಗಾರಾಜ್, ಮಾಲವಿ ಗೋಣೆಪ್ಪ, ನರೇಗಲ್ ಬಸವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net