ವಿದ್ಯುತ್ ಚಾಲಿತ ವಾಹನಗಳ ವ್ಯವಸ್ಥೆಗೆ ಕ್ರಮ

Hagaribommanahalli Roadside Vendors Day celebration,
ಹಗರಿಬೊಮ್ಮನಹಳ್ಳಿಯಲ್ಲಿ ಆಯೋಜಿಸಿದ್ದ ರಸ್ತೆ ಬದಿ ವ್ಯಾಪಾರಿಗಳ ದಿನಾಚರಣೆಯಲ್ಲಿ ಶಾಸಕ ಕೆ.ನೇಮಿರಾಜ ನಾಯ್ಕ ಮಾತನಾಡಿದರು. ಗದ್ದಿಕೆರೆ ಚರಂತೇಶ್ವರ ಸ್ವಾಮೀಜಿ, ಪುರಸಭೆ ಸದಸ್ಯ ನವೀನಕುಮಾರ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದೆ ಅವರ ವ್ಯವಹಾರಕ್ಕೆ ಪ್ರೋತ್ಸಾಹಿಸಬೇಕು ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.

ಪಟ್ಟಣದ ಬೀದಿಬದಿ ವ್ಯಾಪಾರಿಗಳ ಮಹಾಮಂಡಳಿ ತಾಲೂಕು ಘಟಕದಿಂದ ಬುಧವಾರ ಆಯೋಜಿಸಿದ್ದ ಬೀದಿ ಬದಿ ವ್ಯಾಪಾರಿಗಳ ದಿನಾ ಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಬೀದಿ ಬದಿ ವ್ಯಾಪಾರಿಗಳು ತಮ್ಮ ದೇ ಆದ ಸ್ವಾಭಿಮಾನದ ಬದುಕು ಕಟ್ಟಿಕೊಂಡಿರುತ್ತಾರೆ. ಆದರೆ, ಕೆಲವರು ಇವರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಪುರಸಭೆಯಿಂದ ವಿದ್ಯುತ್ ಚಾಲಿತ ವಾಹನಗಳ ವ್ಯವಸ್ಥೆ ಮತ್ತು ತಾಲೂಕು ಸಂಘಕ್ಕೆ ನಿವೇಶನ ಒದಗಿಸುವ ನೀಡುವ ಭರವಸೆ ನೀಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜ್ಯ ರೈತ ಸಂಘದ ವೀರಸಂಗಯ್ಯ ಮಾತನಾಡಿ, ಇಂದು ಪಟ್ಟಣ, ನಗರಗಳಲ್ಲಿ ಮಾಲ್‌ಗಳು ಬೆಳೆಯುತ್ತಿದ್ದು, ಬೀದಿಬದಿಯ ವ್ಯಾಪಾರಿಗಳ ಬದುಕು ಕಷ್ಟವಾಗಿದೆ ಎಂದರು. ಮಹಾಮಂಡಳಿ ಅಧ್ಯಕ್ಷ ಭಾಸ್ಕರ್ ಶ್ರೀನಿವಾಸ ರಾಜ ಅರಸ್ ಮಾತನಾಡಿದರು. ಗದ್ದಿಕೆರೆ ಮಠದ ಚರಂತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹಾಮಂಡಳಿ ರಾಜ್ಯಉಪಾಧ್ಯಕ್ಷ ಭಾಷಾಸಾಬ್, ಕಾರ್ಯದರ್ಶಿ ರಾಜಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net