ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತ

Untitled design (24)
ಹಗರಿಬೊಮ್ಮನಹಳ್ಳಿ ಪಟ್ಟಣದ ಹಳೇ ಊರಿನ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯ 200 ಮೀ. ರಸ್ತೆ ಅಭಿವೃದ್ಧಿ ಮತ್ತು ವಿಸ್ತರಣೆ ಕಾಮಗಾರಿಗೆ ಶಾಸಕ ಕೆ.ನೇಮಿರಾಜ್‌ನಾಯ್ಕ ಗುರುವಾರ ಭೂಮಿ ಪೂಜೆ ನೆರವೇರಿಸಿದರು. ಪುರಸಭೆ ಸದಸ್ಯ ದೀಪಕ್‌ಸಾ ಕಠಾರೆ, ಬಿ.ಗಂಗಾಧರ, ಜೆಡಿಎಸ್ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಗ್ರಾಪಂ ಮಾಜಿ ಅಧ್ಯಕ್ಷ ಜಿ.ಎಂ.ಶಿವಯ್ಯ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ಪಟ್ಟಣದ ಹಳೇ ಊರಿನ ರಾಜ್ಯ ಹೆದ್ದಾರಿ ಹೊಸಪೇಟೆ-ಶಿವಮೊಗ್ಗದ 200 ಮೀ.ರಸ್ತೆ ಅಭಿವೃದ್ಧಿ ಮತ್ತು ವಿಸ್ತರಣೆಗೆ 92.99 ಲಕ್ಷ ರೂ.ಗಳ ಕಾಮಗಾರಿಗೆ ಶಾಸಕ ಕೆ.ನೇಮಿರಾಜ್‌ನಾಯ್ಕ ಭೂಮಿಪೂಜೆ ಗುರುವಾರ ನೆರವೇರಿಸಿದರು.

ಸರ್ಕಾರದ ಬೊಕ್ಕಸದಲ್ಲಿ ಅನುದಾನದ ಕೊರತೆ ಎದುರಾಗಿದೆ. ಆಡಳಿತ ನಡೆಸಲು ಆಗದಿದ್ದರೆ ರಾಜೀನಾಮೆ ನೀಡಲಿ. ಇತ್ತ ಗ್ಯಾರಂಟಿನೂ ಇಲ್ಲ. ಅಭಿವೃದ್ಧಿಯೂ ಇಲ್ಲ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ವಿವಿಧ ಇಲಾಖೆಗಳ ಅಭಿವೃದ್ಧಿಯ ಕೋಟಿ ಕೋಟಿ ರೂ.ಗಳನ್ನು ಬಳಸಿಕೊಳ್ಳುತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಮಹಿಳೆಯರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾರೆಂಬ ಉತ್ತರ ನೀಡುತ್ತಿದ್ದಾರೆ. ಪರಿಸ್ಥಿತಿ ಹೀಗಾದರೆ ಕ್ಷೇತ್ರಗಳ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಶಾಸಕ ಕೆ.ನೇಮಿರಾಜ್‌ನಾಯ್ಕ ಪ್ರಶ್ನಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಪುರಸಭೆ ಸದಸ್ಯ ಬಿ.ಡಿ.ಗಂಗಣ್ಣ, ದೀಪಕ್‌ಸಾ ಕಠಾರೆ, ಗ್ರಾಪಂ ಮಾಜಿ ಅಧ್ಯಕ್ಷ ಜಿ.ಎಂ.ಶಿವಯ್ಯ, ಪ್ರಮುಖರಾದ ಕಿನ್ನಾಳ್ ಸುಬಾಷ್, ಹೋಟೆಲ್ ಸಿದ್ದರಾಜು, ಅಂಬಳಿ ರಂವಿಂದ್ರ ಗೌಡ, ಚಿತ್ತವಾಡ್ಗಿ ಪ್ರಕಾಶ, ಬಾಬಾ ಫಕೃದ್ದೀನ್, ಈ.ಕೆ.ಮೂರ್ತಿ, ಪಾಂಡುರಂಗನಾಯ್ಕ, ಸಾಲ್ಮಿನಿ ನಾಗರಾಜ, ಹರೆಗೊಂಡನಹಳ್ಳಿ ನಾಗರಾಜ, ವಿರುಪಾಕ್ಷಿ, ಹೊಸಪೇಟೆ ಪಿಡಬ್ಲುೃಡಿ ಇಇ ದೇವದಾಸ, ಎಇಇ ಸತೀಶನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net