ಮಾಲವಿ ಡ್ಯಾಂ ಭರ್ತಿಯಿಂದ ಅನುಕೂಲ

bagina arpane
ಮಾಲವಿ ಜಲಾಶಯಕ್ಕೆ ಶಾಸಕ ಕೆ.ನೇಮಿರಾಜ್ ನಾಯ್ಕ ಬಾಗಿನ ಅರ್ಪಿಸಿದರು. ಮಲ್ಲಿಕಾರ್ಜುನ ಶಿವಾಚಾರ್ಯರು, ಡಾ.ಮಹೇಶ್ವರ ಸ್ವಾಮೀಜಿ, ಹಾಲಸಿದ್ಧೇಶ್ವರ ಸ್ವಾಮೀಜಿ, ವೈ.ಮಲ್ಲಿಕಾರ್ಜುನ, ಹನಸಿ ಸಿದ್ದೇಶ, ಬಾದಾಮಿ ಮೃತ್ಯುಂಜಯ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ; ತಾಲೂಕಿನ ಮಾಲವಿ ಜಲಾಶಯಕ್ಕೆ ಗುರುವಾರ ಮಠಾಧೀಶ್ವರ ನೇತೃತ್ವದಲ್ಲಿ ಶಾಸಕ ಕೆ.ನೇಮಿರಾಜ್ ನಾಯ್ಕ ಬಾಗಿನ ಅರ್ಪಿಸಿದರು.

ಈ ವರ್ಷ ಹಿಂಗಾರು ಪ್ರಕೃತಿದತ್ತ ಉತ್ತಮ ಮಳೆಯಾಗಿದೆ. ಜಲಾಶಯ ಮೇಲ್ಭಾಗದ ಗುಡಿಮಾಕುಂಟೆ, ಜಗಳೂರು, ಕೊಟ್ಟೂರು ಹಾಗೂ ಇಟ್ಟಿಗಿ ಭಾಗಗಳಲ್ಲಿ ಮಳೆಯ ಆರ್ಭಟದಿಂದ ಕೆರೆ, ಹಳ್ಳಕೊಳ್ಳಗಳು ಭರ್ತಿಯಾಗಿ ಹಗರಿಹಳ್ಳ ಮೂಲಕ ಜಲಾಶಯಕ್ಕೆ ನೀರು ಬರುತ್ತಿದೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಶಾಸಕ ಕೆ.ನೇಮಿರಾಜ್ ಹೇಳಿದರು.

ಈಗಾಗಲೇ ಕ್ರಸ್ಟ್ ಗೇಟ್‌ಗಳ ರಿಪೇರಿ ಮತ್ತು ಇತರ ಕೆಲಸಗಳಿಗೆ 4 ಕೋಟಿ ರೂ. ನೀಡಲಾಗಿದೆ. ಅದರಂತೆ ಜಲಾಶಯದ ರೂವಾರಿಗಳಾದ ಬಾಚಿಗೊಂಡನಹಳ್ಳಿಯ ಮಾಜಿ ಶಾಸಕ ಚನ್ನಬಸವನಗೌಡರ ಅವರ ಪುತ್ಥಳಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಶಿವಾಚಾರ್ಯರು, ಡಾ.ಮಹೇಶ್ವರ ಸ್ವಾಮೀಜಿ, ಹಾಲಸಿದ್ಧೇಶ್ವರ ಸ್ವಾಮೀಜಿ, ಬೆಣ್ಣಿಹಳ್ಳಿ ಪಂಚಾಕ್ಷರಿ ಶಿವಾಚಾರ್ಯರು, ಸಂಡೂರಿನ ಕೃಷ್ಣಪಾದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.

ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಪುರಸಭೆ ಸದಸ್ಯರಾದ ಬಿ.ಗಂಗಣ್ಣ, ಬಣಕಾರ ಸುರೇಶ್, ನಾಗರಾಜ್ ಜನ್ನು, ಮುಖಂಡರಾದ ಕಿನ್ನಾಳ್ ಸುಭಾಷ್, ಹನಸಿ ಸಿದ್ದೇಶ, ಬಾದಾಮಿ ಮೃತ್ಯುಂಜಯ, ಬಣಕಾರ ಗೋಣೆಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಚಿತ್ತವಾಡ್ಗಿ ಪ್ರಕಾಶ್, ಎಚ್.ಎಂ.ವಿಜಯಕುಮಾರ್, ಹೋಟೆಲ್ ಸಿದ್ದರಾಜ್, ಯು.ಕೆ.ಕೊಟ್ರೇಶ, ಗೊಲ್ಲರ ಜಯಪ್ಪ, ಗರಗ ಪ್ರಕಾಶ್, ಗುಂಡು ಸೊಮಣ್ಣ, ಐ.ಟಿ.ಕೊಟ್ರೇಶ್, ಬಡಿಗೇರ್ ಬಸವರಾಜ್, ಹಂಪಾಪಟ್ಟಣ ಕೊಟ್ರೇಶ್, ಸಿ.ಕಲ್ಲೇಶ, ಮೆಟ್ರಿ ನಾಗರಾಜ್, ಎಂ.ಸಿದ್ದೇಶ, ಟಿಪುಡಿ ಸಿದ್ದಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net