ಮಾಲವಿ ಕ್ರಸ್ಟ್‌ಗೇಟ್ ದುರಸ್ತಿಗೊಳಿಸಿ

H B halli malavi dam crustgete
ಹಬೊಹಳ್ಳಿ ತಾಲೂಕಿನ ಮಾಲವಿ ಜಲಾಶಯದ ಕ್ರಸ್ಟ್‌ಗೇಟ್ ದುರಸ್ತಿಗಾಗಿ ರಾಜ್ಯ ರೈತ ಸಂಘ, ಸಹಮತ ವೇದಿಕೆ ಪದಾಧಿಕಾರಿಗಳು ಶನಿವಾರ ಮುನಿರಾಬಾದ್ ಇಇ ಕಚೇರಿಯ ತಾಂತ್ರಿಕ ವಿಭಾಗ ಅಧಿಕಾರಿ ಲತಾ ಹಿರೇಮಠ್‌ಗೆ ಮನವಿ ಸಲ್ಲಿಸಿದರು. ಸಂಘದ ರಾಜ್ಯ ಕಾರ್ಯದರ್ಶಿ ಬಿ.ಗೋಣಿಬಸಪ್ಪ, ತಾಲೂಕು ಕಾರ್ಯದರ್ಶಿ ರವಿಕುಮಾರ್ ತಂಬ್ರಹಳ್ಳಿ, ಸಹಮತ ವೇದಿಕೆ ನೀಲಕಂಠಪ್ಪ ಇದ್ದರು.
Published on

ಹಗರಿಬೊಮ್ಮನಹಳ್ಳಿ: ತಾಲೂಕಿನ ಜೀವನಾಡಿ ಮಾಲವಿ ಜಲಾಶಯದ ಕ್ರಸ್ಟ್‌ಗೇಟ್ ದುರಸ್ತಿಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಸಹಮತ ವೇದಿಕೆ ಪದಾಧಿಕಾರಿಗಳು ಮುನಿರಾಬಾದ್‌ನ ನೀರಾವರಿ ಇಲಾಖೆ ಕಚೇರಿಯ ತಾಂತ್ರಿಕ ವಿಭಾಗ ಅಧಿಕಾರಿ ಲತಾ ಹಿರೇಮಠಗೆ ಮನವಿ ಸಲ್ಲಿಸಿದರು.

ವೇದಿಕೆಯ ಅಧ್ಯಕ್ಷ ಜಿ.ಲಕ್ಷ್ಮೀಪತಿ ಮಾತನಾಡಿ, ತಾಲೂಕಿನ ಮಹತ್ವಾಕಾಂಕ್ಷಿ ಶಾಶ್ವತ ನೀರೊದಗಿಸುವ ಯೋಜನೆ ಮಾಲವಿ ಜಲಾಶಯ ಕಳೆದ ವರ್ಷ ಭರ್ತಿಯಾಗಿತ್ತು. ಗೇಟ್‌ಗಳನ್ನು ತೆರೆಯುವ ಮೂಲಕ ಹಗರಿ ಹಳ್ಳ ಸೇರಿ ಬ್ಯಾಲಾಳು ಕೆರೆ ತುಂಬಿಸಲಾಗಿತ್ತು.

ಆಗಲೇ ಗೇಟ್ ಪೂರ್ಣ ಮುಚ್ಚಲು ಬಾರದೆ ಹಲವಾರು ಕ್ಯೂಸೆಕ್ ನೀರು ಅನಗತ್ಯವಾಗಿ ಹರಿದು ಪೋಲು ಮಾಡಲಾಗಿತ್ತು. ಆದರೆ ಈ ಬಾರಿ ಮಳೆ ಕೊರತೆಯಿಂದ ಜಲಾಶಯಕ್ಕಿನ್ನು ನೀರು ಬಂದಿಲ್ಲ. ಸದ್ಯಕ್ಕೆ ಜಲಾಶಯದ ಗೇಟ್ ಸಂಪೂರ್ಣವಾಗಿ ಮುಚ್ಚಲು ಬರುತ್ತಿಲ್ಲ. ಬೃಹತ್ ನೀರಾವರಿ ಇಲಾಖೆ ದುರಸ್ತಿಗೆ ಮುಂದಾಗಿಲ ಎಂದರು.

ತಾಂತ್ರಿಕ ವಿಭಾಗ ಅಧಿಕಾರಿ ಲತಾ ಹಿರೇಮಠ್ ಮಾತನಾಡಿ, ಈಗಾಗಲೇ ಮಾಲವಿ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿ ಕಾಮಗಾರಿಗೆ 4 ಕೋಟಿ ರೂ. ಮಂಜೂರಾಗಿದ್ದು, ಟೆಂಡರ್ ಕರೆಯಲಾಗಿತ್ತು. ಟೆಂಡರ್‌ನಲ್ಲಿ ಯಾರೂ ಭಾಗವಹಿಸಲಿಲ್ಲ. ಜೂನ್‌ನಲ್ಲಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net