ನಿವೇಶನ ಹಂಚಿಕೆ ನಿರಾಕರಣೆ ಮಾಹಿತಿ ಪಡೆದು ಕ್ರಮ

Hb halli Mla
ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಪಂಗೆ ಹೂವಿನ ಹಡಗಲಿಯ ಶಾಸಕ ಕೃಷ್ಣನಾಯ್ಕ ಹಾಗೂ ತಹಸೀಲ್ದಾರ್ ಆರ್.ಕವಿತಾ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಪ್ರಮುಖರಾದ ಶಾನಭೋಗರ ಗುರುಸಿದ್ದಪ್ಪ, ಸಿದ್ದನಗೌಡ್ರು, ಶ್ರೀಪತಿ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ತಾಲೂಕಿನ ಬನ್ನಿಕಲ್ಲು ಗ್ರಾಪಂ ಕಚೇರಿಗೆ ಶುಕ್ರವಾರ ಸಂಜೆ ಶಾಸಕ ಕೃಷ್ಣನಾಯ್ಕ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಗ್ರಾಪಂ ವ್ಯಾಪ್ತಿಯಲ್ಲಿ ಕೊಂಡೇನಹಳ್ಳಿ ಗ್ರಾಮದಲ್ಲಿ 2015-16ರಲ್ಲಿ 36 ನಿವೇಶನಗಳನ್ನು ದುರ್ಬಲರಿಗೆ ಹಂಚಿಕೆ ಮಾಡಲಾಗಿದೆ. ಆದರೆ, ಈಗಿರುವ ಸ್ಥಳೀಯ ಆಡಳಿತ ಅದನ್ನು ನಿರಾಕರಿಸುತ್ತಿದೆ ಎನ್ನುವ ದೂರುಗಳು ಬಂದಿದ್ದು, ತಹಸೀಲ್ದಾರ್ ಹಾಗೂ ತಾಪಂ ಇಒ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವೆ ಕೃಷ್ಣನಾಯ್ಕ ಎಂದರು. ಡೇಟಾ ಆಪರೇಟರ್ ವಿರುದ್ಧ ಸಾಕಷ್ಟು ದೂರುಗಳಿವೆ. ಪರಿಶೀಲಿಸಿ ಕ್ರಮಕೈಗೊಳ್ಳಿ ಎಂದು ಜಿಪಂ ಅಧಿಕಾರಿ ಆದೇಶಿಸಿದ್ದರು. ಆದರೆ, ಪಿಡಿಒ ಅವರು ಆತನನ್ನೇ ಕೆಲಸಕ್ಕೆ ತೆಗೆದುಕೊಂಡಿದ್ದಾರೆ ಎಂದು ಮುಖಂಡ ಬಸಾಪುರದ ಶ್ರೀಪತಿ ತಿಳಿಸಿದರು. ಅಧಿಕಾರಿಗಳಿಂದ ಮಾಹಿತಿ ಕ್ರಮವಹಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆಗಳೆಲ್ಲ ಸಂಪೂರ್ಣ ಹದಗೆಟ್ಟಿವೆ. ಫೋಟೋಗಳ ಸಮೇತ ಸರ್ಕಾರಕ್ಕೆ ಮನವಿ ಮಾಡಿರುವೆ. ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆ ಹಾಗೂ ಸಡಕ್ ಯೋಜನೆಯ ರಸ್ತೆಗಳ ಅಭಿವೃದ್ಧಿಗೆ 250ಕೋಟಿ ರೂ.ಗೂ ಅಧಿಕ ಅನುದಾನ ಬೇಕು. ಆದರೆ, ಸರ್ಕಾರ ಅನುದಾನ ನೀಡುವಲ್ಲಿ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.

ಜಿಪಂ ಮಾಜಿ ಸದಸ್ಯ ಶಾನಭೋಗರ ಗುರುಸಿದ್ದಪ್ಪ, ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ, ಮಾಜಿ ಸದಸ್ಯ ಉಮೇಶ್, ಡಾ.ಬಾಲಪ್ಪ, ಬಳೆಗಾರ ಉಮೇಶಪ್ಪ, ಬುಳ್ಳಪ್ಪ ಗ್ರಾಪಂ ಮಾಜಿ ಅಧ್ಯಕ್ಷರಾದ ಮಹಾದೇವ, ಎಂ.ಎಸ್.ಲಿಂಗರಾಜ್, ತಹಸೀಲ್ದಾರ್ ಆರ್.ಕವಿತಾ, ತಾಪಂ ಇಒ ಡಾ.ಪರಮೇಶ್ವರಪ್ಪ, ಪಿಡಿಒ ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net