ಉಪನ್ಯಾಸಕರು ಶಿಸ್ತು ಪಾಲನೆ ಮಾಡಲಿ

hb halli lectures
ಹಗರಿಬೊಮ್ಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾವೇಶದಲ್ಲಿ ಪಪೂ ಕಾಲೇಜುಗಳ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಡಾ.ಗಂಗಾಧರಯ್ಯ ಹಿರೇಮಠ್, ಟಿ.ಪಾಲಾಕ್ಷ, ನಾಗರಾಜ್ ಸಿ.ಹವಾಲ್ದಾರ್, ಪಿ.ಶರತ್‌ಚಂದ್ರ, ಶ್ರೀಶೈಲ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ಉಪನ್ಯಾಸಕರು ಸಮಯ ಮತ್ತು ಶಿಸ್ತನ್ನು ಪಾಲನೆ ಮಾಡಬೇಕು. ಅದನ್ನು ವಿದ್ಯಾರ್ಥಿಗಳು ಅನುಸರಿಸಲಿದ್ದಾರೆ ಎಂದು ದಾವಣಗೆರೆಯ ನಿವೃತ್ತ ಪ್ರಾಧ್ಯಾಪಕ ಡಾ.ಗಂಗಾಧರಯ್ಯ ಹಿರೇಮಠ ಹೇಳಿದರು.

ಪಟ್ಟಣದ ಗುರುಭವನದಲ್ಲಿ ವಿಜಯನಗರ ಜಿಲ್ಲಾ ಪಪೂ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರ ಸಂಘಟನೆ ಹಾಗೂ ವಿದ್ಯಾನಿಕೇತನ ಕಾಲೇಜ್ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದರು. ಉಪನ್ಯಾಸಕರ ಉತ್ತಮ ಸೇವೆಯಿಂದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹಾದಿ ಸುಗಮವಾಗಲಿದೆ ಎಂದರು.

ಡಿಡಿಪಿಯು ಟಿ.ಪಾಲಾಕ್ಷ ಮಾತನಾಡಿ, ಕಾಲೇಜುಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಗುಣಮಟ್ಟದ ಶಿಕ್ಷಣ ನೀಡಿ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಗಿಂತ ಗುಣಮಟ್ಟದ ಶಿಕ್ಷಣ ಬಹುಮುಖ್ಯ ಎಂದರು.

ನಿವೃತ್ತ ನೌಕರರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಸಿ.ಹವಲ್ದಾರ್, ಪ್ರಮುಖರಾದ ಪಿ.ಶರತ್‌ಚಂದ್ರ, ಶ್ರೀಶೈಲ, ಶಿವರಾಂ, ಎಂ.ಆರ್.ಶೇಖರ್, ಕೆ.ಬಿ.ಎಂ.ನಾಗಲಿಂಗಸ್ವಾಮಿ, ಎಂ.ಟಿ.ಗಿರೀಶ್, ಡಾ.ಎಂ.ಕೆ.ದುರುಗಪ್ಪ, ಡಾ.ರಾಜಣ್ಣ, ಗೂಳಪ್ಪ, ಮಲ್ಲಿಕಾರ್ಜುನ, ಗೌಡರ ಬಸವರಾಜ್, ಹೊಸಪೇಟೆಯ ಪಾರ್ವತಿ, ಕೊಟ್ಟೂರಿನ ಡಾ.ಜಗದೀಶ ಚಂದ್ರಬೋಸ್ ಮತ್ತು ದಯಾನಂದ ಕಿನ್ನಾಳ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net