ವಾರಸುದಾರರ ಕೈ ಸೇರಿದ₹5 ಲಕ್ಷ ಚಿನ್ನಾಭರಣದ ಬ್ಯಾಗ್

H b halli bag return
ಹಗರಿಬೊಮ್ಮನಹಳ್ಳಿಯ ಸಾರಿಗೆ ಘಟಕದಲ್ಲಿ ವಾರಸುದಾರರಿಗೆ ಬ್ಯಾಗ್‌ನ್ನು ಹಿಂತಿರುಗಿಸಲಾಯಿತು. ಘಟಕದ ವ್ಯವಸ್ಥಾಪಕ ನೀಲಪ್ಪ, ಸಂಚಾರ ನಿರೀಕ್ಷಕ ಸಂತೋಷ್‌ನಾಯ್ಕ, ಅಧಿಕಾರಿಗಳಾದ ಸೇವಾನಾಯ್ಕ, ಮಂಜುನಾಥ, ಸಿಬ್ಬಂದಿ ಮಾರುತಿ ಶಿಕ್ಷಕ ಮುಸ್ತಾಕ್, ಪ್ರಮುಖರಾದ ಸಂಚಿ ಶಿವಕುಮಾರ್, ಗುಲ್ಜಾರ್ ಇದ್ದರು.
Published on

ಹಗರಿಬೊಮ್ಮನಹಳ್ಳಿ: ಇಲ್ಲಿಯ ಕೆಎಸ್‌ಆರ್‌ಟಿಸಿ ಡಿಪೋದ ಹೊರಗುತ್ತಿಗೆ ನೌಕರರ ಮಾರುತಿ ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣದ ಬ್ಯಾಗ್‌ನ್ನು ವಾರಸುದಾರರಾದ ಮೈಮ್‌ಉನ್ನೀಸಾ ಬೇಗಂ ಅವರಿಗೆ ಸೋಮವಾರ ಮರಳಿಸಿ ಪ್ರಮಾಣಿಕತೆ ಮರೆದಿದ್ದಾರೆ.

ಭಾನುವಾರ ರಾತ್ರಿ ಬಸ್‌ಗಳನ್ನು ಸ್ವಚ್ಛಗೊಳಿಸುವಾಗ ಮಾರುತಿಗೆ ಪ್ರಯಾಣಿಕರ ಚಿನ್ನಾಭರಣದ ಬ್ಯಾಗ್ ಸಿಕ್ಕಿದೆ. ಅದನ್ನು ಘಟಕದ ಅಧಿಕಾರಿ ಸಂಚಾರ ನಿರೀಕ್ಷಕ ಸಂತೋಷ್‌ನಾಯ್ಕ ಅವರಿಗೆ ನೀಡಿದ್ದಾರೆ. ಅಧಿಕಾರಿಗಳು ಬ್ಯಾಗ್‌ನ್ನು ಪರಿಶೀಲಿಸಿದಾಗ ಐಡಿಕಾರ್ಡ್, ಸುಮಾರು 4 ಲಕ್ಷ ರೂ.ಬೆಲೆಬಾಳುವ ಚಿನ್ನಾಭರಣ ಆಭರಣಗಳು ಹಾಗೂ 500 ರೂ. ಕಂಡು ಬಂದಿದೆ. ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬ್ಬಂದಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net