ಕೊಟ್ಟೂರೇಶ್ವರ ಜಾತ್ರೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತನ ಮೇಲೆ ಕರಡಿ ದಾಳಿ, ಗಾಯ

Bear
Published on

ಹಗರಿಬೊಮ್ಮನಹಳ್ಳಿ: ಕೊಟ್ಟೂರೇಶ್ವರ ರಥೋತ್ಸವ ನಿಮಿತ್ತ ಹೊಸಪೇಟೆಯಿಂದ ಕೊಟ್ಟೂರಿಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಭಕ್ತನ ಮೇಲೆ ತಾಲೂಕಿನ ಅನೆಕಲ್ಲು ಗ್ರಾಮದ ಬಳಿ ಶನಿವಾರ ಕರಡಿ ದಾಳಿ ಮಾಡಿ ಗಾಯಗೊಳಿಸಿದೆ.

ಹೊಸಪೇಟೆಯ ಸಿದ್ಧಾರ್ಥ (18) ಗಾಯಾಳು. ಹೊಸಪೇಟೆಯಿಂದ ವರದಾಪುರದ ಅನೇಕಲ್ಲು ಮಾರ್ಗವಾಗಿ ಕೊಟ್ಟೂರಿಗೆ ಪಾದಯಾತ್ರೆ ಕೈಗೊಂಡಿದ್ದ 20 ಜನರ ತಂಡದ ಯುವಕನ ಮೇಲೆ ಕರಡಿ ದಾಳಿ ಮಾಡಿದೆ ಎನ್ನಲಾಗಿದೆ. ಕಾಲು ಹಾಗೂ ದೇಹದ ಮೇಲೆ ಪರಚಿದ ಗಾಯಗಳಾಗಿವೆ. ಈತ ಪಾದಯಾತ್ರಿಗಳಿಗಿಂತ ಮುಂದೆ ಒಬ್ಬನೇ ನಡೆದುಕೊಂಡ ಹೋಗುತ್ತಿದ್ದ ವೇಳೆ ದಾಳಿ ನಡೆದಿದೆ. ಬಳಿಕ ಹಿಂದಿನಿಂದ ಬಂದ ಭಕ್ತರು ನೋಡಿ, ಯುವಕನನ್ನು ರಕ್ಷಿಸಿ, ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕರೆದುಕೊಂಡು ಹೋಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net