ಕಿಂಡ್ರಿ ಲಕ್ಷ್ಮೀಪತಿಗೆ ಜಾನಪದ ಲೋಕ ಪ್ರಶಸ್ತಿ

Kindri Lakshmipati Sudugadu Sidda Artist
ಸುಡುಗಾಡು ಸಿದ್ದರ ಕಲಾವಿದ ಕಿಂಡ್ರಿ ಲಕ್ಷ್ಮೀಪತಿ.
Published on

ಹಗರಿಬೊಮ್ಮನಹಳ್ಳಿ: ಎಚ್.ಓಬಾಳಪುರದ ಸುಡುಗಾಡು ಸಿದ್ದರ ಕಲಾವಿದ ಕಿಂಡ್ರಿ ಲಕ್ಷ್ಮೀಪತಿಗೆ ಜಾನಪದ ಲೋಕ ಪ್ರಶಸ್ತಿಗೆ ಲಭಿಸಿದೆ ಎಂದು ಜಾನಪದ ಪರಿಷತ್ತು ಅಧ್ಯಕ್ಷ ಟಿ.ತಿಮ್ಮೆಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಾನಪದ ಕಲೆ ಉಳಿವಿಗಾಗಿ ನೀಡಿರುವ ಕೊಡುಗೆ ಗುರುತಿಸಿ, ಅದನ್ನು ಜಾನಪದ ಕ್ಷೇತ್ರದ ಜೀವಮಾನದ ಸಾಧನೆ ಎಂದು ಪರಿಗಣಿಸಿ 2021ರ ಜಾನಪದ ಲೋಕ ಪ್ರಶಸ್ತಿ ಜತೆಗೆ 10 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ನೀಡುತ್ತಿರುವುದು ಸಂತಸ ಮತ್ತು ಹೆಮ್ಮೆಯೆನಿಸಿದೆ. ಕಲೆಯಿಂದ ಬಾಲ್ಯ ವಿವಾಹ ತಡೆ, ಶಾಲೆಗೆ ಮಕ್ಕಳನ್ನು ಕಳುಹಿಸಿ, ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮ ಮಾಡಿದ್ದೇನೆ. ಮೈಸೂರು ದಸರಾ, ಆಳ್ವಾಸ್ ನುಡಿಸಿರಿ, ಹಂಪಿ ಉತ್ಸವ ಸೇರಿದಂತೆ ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದೇನೆ. ಇದು ನಿರಂತರವಾಗಿರುತ್ತದೆ.| ಕಿಂಡ್ರಿ ಲಕ್ಷ್ಮೀಪತಿ, ಜಾನಪದ ಲೋಕ ಪ್ರಶಸ್ತಿ ವಿಜೇತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net