

ಹಗರಿಬೊಮ್ಮನಹಳ್ಳಿ ತಾಲೂಕು ಜಯ ಕರ್ನಾಟಕ ಸಂಘಟನೆಯಿಂದ ಮುಖ್ಯಪೇದೆ ಶಂಕರ್ ಗೌಡರಿಗೆ ಮನವಿ ಸಲ್ಲಿಸಿದರು. ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕದ ಅಧ್ಯಕ್ಷ ಆರ್.ಪ್ರಕಾಶನಾಯ್ಕ, ಕಾರ್ಯದರ್ಶಿ ದೇವರಮನಿ ನಿಂಗಪ್ಪ, ಮುಖ್ಯಪೇದೆ ಶಂಕರ್ ಗೌಡ ಇತರರಿದ್ದರು.
ಹಗರಿಬೊಮ್ಮನಹಳ್ಳಿ: ಬೆಳಗಾವಿ ಜಿಲ್ಲೆಯ ಬಾಳೆಕುಂದ್ರಿಯಲ್ಲಿ ಸಾರಿಗೆ ಸಂಸ್ಥೆ ಬಸ್ ನಿರ್ವಾಹಕರಿಂದ ಟಿಕೆಟ್ ಪಡೆದುಕೊಳ್ಳುವ ವೇಳೆ ಭಾಷೆ ವಿಚಾರವಾಗಿ ಮೇಲೆ ಹಲ್ಲೆ ಮಾಡಿರುವುದನ್ನು ಜಯ ಕರ್ನಾಟಕ ಸಂಘಟನೆ ಖಂಡಿಸಿ, ಹಲ್ಲೆಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಪೊಲೀಸ್ ಇಲಾಖೆಗೆ ಭಾನುವಾರ ಮನವಿ ಸಲ್ಲಿಸಲಾಯಿತು.
ಗ್ರಾಮ ಘಟಕದ ಅಧ್ಯಕ್ಷ ಆರ್.ಪ್ರಕಾಶ ಮಾತನಾಡಿ, ಹಲ್ಲೆ ಮಾಡಿದವರನ್ನು ಬಂಧಿಸಿದರೆ ಸಾಲದು, ಇಂತಹ ಕೃತ್ಯ ಮರುಕಳಿಸದಂತೆ ಉಳಿದ ಚಾಲಕರು ಹಾಗೂ ನಿರ್ವಾಹಕರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಬೇಕೆಂದರೆ ಹಲ್ಲೆ ಮಾಡಿದ ಪುಂಡರನ್ನು ಗಡಿಪಾರು ಮಾಡಬೇಕು. ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು. ಹಲ್ಲೆಗೊಳಗಾದ ಇಲಾಖೆ ಸಿಬ್ಬಂದಿಗೆ ಧೈರ್ಯ ತುಂಬಿ, ಕೆಲಸ ಮಾಡಲು ಅನುಕೂಲಮಾಡಬೇಕು ಎಂದರು.
ಸಂಘಟನೆಯ ತಾಲೂಕು ಉಪಾಧ್ಯಕ್ಷ ಸಿ.ಮಂಜುನಾಥ, ಕೆ.ಬಿ.ಸಿದ್ದೇಶ, ಗ್ರಾಮ ಕಾರ್ಯಾಧ್ಯಕ್ಷ ಎಲ್.ಸಂತೋಷ, ಪ್ರಧಾನ ಕಾರ್ಯದರ್ಶಿ ದೇವರಮನಿ ನಿಂಗಪ್ಪ, ಈಶ್ವರ ನಾಯ್ಕ, ಕಾರ್ಯದರ್ಶಿ ಕೃಷ್ಣನಾಯ್ಕ, ಕೆ.ಶಿವಕುಮಾರ್, ಸದಸ್ಯರಾದ ಭೋವಿ ಅಭಿಷೇಕ್, ಕರಿ ಬಸವರಾಜ, ಮೊಲೀಸ್ ದಶರಥ, ಮಲ್ಲೇಶ ನಾಯ್ಕ ಇತರರು ಇದ್ದರು.