ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ

H b halli mahajanasena protest
ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವರಕೆರೆ ಹಾಗೂ ಲೋಕಪ್ಪನ ಹೊಲ ವ್ಯಾಪ್ತಿಯಲ್ಲಿ ಎಸ್‌ಎಲ್‌ಆರ್ ಕಂಪನಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಭೂಮಿ ತೆರವಿಗೆ ಆಗ್ರಹಿಸಿ ಕರ್ನಾಟಕ ಮಹಾಜನ ಸೇನೆ ತಾಲೂಕು ಘಟಕ ಪದಾಧಿಕಾರಿಗಳು ಉಪ ತಹಸೀಲ್ದಾರ್ ಶಿವಕುಮಾರಗೌಡಗೆ ಮನವಿ ಸಲ್ಲಿಸಿದರು. ಉಪಾಧ್ಯಕ್ಷ ಸಿ.ಹನುಮಂತ, ಗೌರವಾಧ್ಯಕ್ಷ ಕೆ.ಲಕ್ಷ್ಮಣ, ಕಾರ್ಯಾಧ್ಯಕ್ಷ ಎಂ.ಅಂಜಿನಪ್ಪ, ಸಹ ಕಾರ್ಯದರ್ಶಿ ಯು.ಕಾಸಿಂಸಾಬ್ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ನಾರಾಯಣ ದೇವರಕೆರೆ ಹಾಗೂ ಲೋಕಪ್ಪನ ಹೊಲ ಗ್ರಾಮದ ಪಕ್ಕದಲ್ಲಿರುವ ಎಸ್‌ಎಲ್‌ಆರ್ ಮೆಟಾಲಿಕ್ಸ್ ಕಂಪನಿಯಿಂದ ಸುತ್ತಮುತ್ತ ಇರುವ ಸರ್ಕಾರದ ನಿವೇಶನ ಒತ್ತುವರಿ ಮಾಡಿಕೊಂಡಿದೆ ಎಂದು ಆರೋಪಿಸಿ ಉಪ ತಹಸೀಲ್ದಾರ್ ಶಿವಕುಮಾರಗೌಡಗೆ ಕರ್ನಾಟಕ ಮಹಾಜನ ಸೇನೆ ತಾಲೂಕು ಘಟಕ ಪದಾಧಿಕಾರಿಗಳು ಗುರುವಾರ ಮನವಿ ಸಲ್ಲಿಸಿದರು.

ತಾಲೂಕು ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಎಸ್‌ಎಲ್‌ಆರ್ ಕಂಪನಿಯವರು ಪರಂಪೋಕು ಸೇರಿದಂತೆ ಮತ್ತಿತರ ಸರ್ಕಾರಿ ನಿವೇಶನವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಪ್ರದೇಶದಲ್ಲಿರುವ ಐದು ಸಾವಿರಕ್ಕೂ ಹೆಚ್ಚು ಕುರಿಗಳು ಹಾಗೂ ಎರಡು ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಮೇವಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಕೂಡಲೇ ತಾಲೂಕು ಆಡಳಿತ ಒತ್ತುವರಿ ಭೂಮಿಯನ್ನು ವಶಪಡಿಸಿಕೊಳ್ಳಬೇಕೆಂದು ಆಗ್ರಹಿಸಿದರು.

ಎಸ್‌ಎಲ್‌ಆರ್ ಕಂಪನಿ ದೇವಸ್ಥಾನದ ರಸ್ತೆಯನ್ನು ಅಕ್ರಮವಾಗಿ ಮುಚ್ಚಿದ್ದು, ಈ ಹಿಂದೆ ಕಂಪನಿ ಹಾಗೂ ತಾಲೂಕ ಆಡಳಿತಕ್ಕೆ ಮನವಿ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಹಾಜರು ಮಾಡುವ ಮೂಲಕ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇಂದಿಗೂ ತೆರವು ಕಾರ್ಯ ನಡೆದಿಲ್ಲ ಎಂದು ದೂರಿದರು.

ಪ್ರಮುಖರಾದ ಸಿ.ಬಸವರಾಜ, ಬಿ.ಕನಕಪ್ಪ, ಮಾಬುಸಾಬ್, ಪಿ.ಹನುಮಂತಪ್ಪ, ಜಿ.ಪರಶುರಾಮ, ಎಚ್.ಸಿ.ಹನುಮಂತಪ್ಪ, ಎಂ.ರಾಜೇಶ, ಹುಲುಗಪ್ಪ, ಕೆ.ರಾಜು, ಜಿ.ಪರಮೇಶ, ಮೆಹಬೂಬ್ ಸಾಬ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net