

ಹಗರಿಬೊಮ್ಮನಹಳ್ಳಿ: ಪಟ್ಟಣದ ಗಾಳೆಮ್ಮ ದೇವಿ ಜಾತ್ರಾ ಮಹೋತ್ಸವ ಬುಧವಾರ ಮಹೋತ್ಸವ ಸಂಪನ್ನಗೊಂಡಿತು.
ಜಾತ್ರೆ ಹಿನ್ನೆಲೆಯಲ್ಲಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು ನೇತೃತ್ವದಲ್ಲಿ ಮೇ 5 ರಂದು ಹಂದರ ಪೂಜೆ, ದೇವಿಗೆ ಬೆಳಗಿನ ಜಾವ ಗಂಗೆಪೂಜೆ ನೆರವೇರಿಸಲಾಯಿತು. ಬಳಿಕ ದೇವಿಗೆ ಕುಂಕುಮಾರ್ಚನೆ ಮತ್ತು ಪಂಚಾಮೃತ ಅಭಿಷೇಕ, ಎಲೆಪೂಜೆ ನೆರವೇರಿತು. ದೇಗುಲದ ಪ್ರಧಾನ ಅರ್ಚಕ ಮಂಜುನಾಥ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಂಡರು. ಮೇ 6 ರಂದು ದೇವಿಗೆ ಪಂಚಾಮೃತ ಅಭಿಷೇಕ ಸೇರಿ ವಿಶೇಷ ಪೂಜೆ ಕೈಂಕರ್ಯಗಳು ನಡೆದವು. ಜಾತ್ರೆ 9 ವರ್ಷಗಳಿಗೊಮ್ಮೆ ನಡೆಯಲಿದೆ. ರಾಮನಗರ (ನಾಣಿಕೆರೆ)ಯ ಪ್ರತಿಯೊಂದು ಕುಟುಂಬದವರು ಬಂಧುಗಳಿಂದ ಆಹ್ವಾನ ನೀಡಿದ್ದರಿಂದ ಜನಜಂಗುಳಿ ಸೃಷ್ಟಿಯಾಗಿತ್ತು. ಭಕ್ತರು ದೇವಿಗೆ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು. ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಸಮಿತಿಯ ಅಧ್ಯಕ್ಷ ಸಿ.ಎಂ.ರಾಮಣ್ಣ ಪ್ರತಿಕ್ರಿಯಿಸಿ, ಎಲ್ಲರ ಸಹಕಾರದೊಂದಿಗೆ ಜಾತ್ರೆ ಯಶಸ್ವಿಯಾಗಿದೆ. ಸಾವಿರಾರು ಭಕ್ತರು ದರ್ಶನ ಪಡೆದು ಕೃತಾರ್ಥರಾಗಿದ್ದಾರೆ ಎಂದರು. ಪ್ರಧಾನ ಕಾರ್ಯದರ್ಶಿ ಬಂಗಾರಿ ಗಾಳಿರಾಜ, ಪದಾಧಿಕಾರಿಗಳಾದ ಬಡಲಡಕಿ ಕೃಷ್ಣಪ್ಪ, ಅರಸಿಕೇರಿ ಹನುಮಂತಪ್ಪ ಗುಂಡ್ರ ಹನುಮಂತಪ್ಪ, ಹುಚ್ಚಪ್ಪ ಸರ್ದಾರ್ ಯಮನೂರ, ಹುಳ್ಳಿ ಮಂಜುನಾಥ, ಬಡಿಗೇರ ಬಸವರಾಜ, ರಾಮಚಂದ್ರಪ್ಪ, ಬಂಟರ ಗಾಳೆಪ್ಪ, ಸರ್ದಾರ್ ಅಂಬಣ್ಣ, ರಾಚಣ್ಣವರ, ಎಂ.ಅಶೋಕ, ಎಂ.ಹುಲುಗಪ್ಪ, ಪ್ರಕಾಶ ಇತರರಿದ್ದರು.