

ಹಗರಿಬೊಮ್ಮನಹಳ್ಳಿ: ಪಟ್ಟಣದ ಶಾಸಕರ ಕಚೇರಿ ಆವರಣದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಶಾಸಕ ಕೆ.ನೇಮಿರಾಜ್‌ನಾಯ್ಕ ಮೋಟಾರ್ ಪಂಪ್‌ಸೆಟ್ ಸಾಮಾಗ್ರಿಗಳನ್ನು ಭಾನುವಾರ ವಿತರಿಸಿದರು.
ರೈತರ ಅನುಕೂಲಕ್ಕಾಗಿ ಎಸ್‌ಇಪಿ, ಟಿಎಸ್‌ಪಿ ಯೋಜನೆಯಡಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ತಲಾ 3.5 ಲಕ್ಷ ರೂ. ಮೊತ್ತದಲ್ಲಿ 15 ಜನ ಫಲಾನುಭವಿಗಳಿಗೆ ಮೋಟಾರ್ ಪಂಪ್‌ಸೆಟ್ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.
ಮುಂಬರುವ ದಿನಗಳಲ್ಲಿ ಸಾಮಾನ್ಯ ವರ್ಗದ ರೈತರಿಗೂ ಗಂಗಾ ಕಲ್ಯಾಣ ಯೋಜನೆಯಡಿ ಯಾವುದೇ ತಾರತಮ್ಯ ಇಲ್ಲದೇ, ಅರ್ಹರನ್ನು ಆಯ್ಕೆ ಮಾಡಿ 30ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೋಟಾರ್ ಪಂಪ್‌ಸೆಟ್ ಸಾಮಗ್ರಿಗಳನ್ನು ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜೆಡಿಎಸ್ ತಾಲೂಕ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ಪುರಸಭೆ ಮಾಜಿ ಸದಸ್ಯ ಬಾದಾಮಿ ಮೃತ್ಯುಂಜಯ, ಪ್ರಮುಖರಾದ ಮರಿಯಪ್ಪ, ಬ್ಯಾಟಿ ನಾಗರಾಜ, ಹೋಟೆಲ್ ಸಿದ್ಧರಾಜು, ಪಾಂಡುರಂಗ ನಾಯ್ಕ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಅರುಣಕುಮಾರ ಇದ್ದರು.