

ಹಗರಿಬೊಮ್ಮನಹಳ್ಳಿ: ಭಾರತದ ಭವಿಷ್ಯ ಯುವಜನತೆ ಕೈಯಲ್ಲಿದೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಅಭಿಪ್ರಾಯಪಟ್ಟರು.
ಪಟ್ಟಣದ ಗಂಗಾವತಿ ವೆಂಕೋಬಣ್ಣ ಪಂಚರತ್ನ ಪಾರ್ವತಮ್ಮನವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿಮಾತನಾಡಿದರು.
ಈಗಾಗಲೇ ಪ್ರಪಂಚವೇ ನಮ್ಮ ದೇಶದತ್ತ ತಿರುಗಿ ನೋಡುವದಷ್ಟೇ ಅಲ್ಲ, ಬಲಿಷ್ಠ ದೇಶವೆಂದು ಕರೆಯುತ್ತಿದೆ. ಇದನ್ನು ಯುವಜನತೆ ಮುಂದುವರಿಸಬೇಕು. ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಶ್ರಮಿಸಬೇಕು. ದೇಶದ ಪ್ರಗತಿ ಬಗ್ಗೆ ಚಿಂತನೆ ಮಾಡಿ, ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು ಕರೆ ನೀಡಿದರು.
ಪ್ರಾಂಶುಪಾಲ ಎಸ್.ಕೆ.ಬಸವರಾಜ, ಉಪನ್ಯಾಸಕರಾದ ಡಾ.ನಾಗನಗೌಡ, ಡಾ.ಎಂ.ಮಲ್ಲಿಕಾರ್ಜುನ, ರಾಜಲಿಂಗಪ್ಪ, ಡಾ.ವೀರೇಶ್ವರನಾಯ್ಕ, ವಸಂತಕುಮಾರ್, ಎಚ್.ಪಂಪಾಪತಿ, ಡಾ.ನಾಗನಗೌಡ್ರು, ಸಿ.ಎಂ.ಶ್ರೀನಿವಾಸ, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.