ಕರಾಟೆಯಲ್ಲಿ ವಿದ್ಯಾರ್ಥಿಗಳ ಸಾಧನೆ

Untitled design(11)
ಪ್ರಶಸ್ತಿ ಪದಕಗಳೊಂದಿಗೆ ಹಗರಿಬೊಮ್ಮನಹಳ್ಳಿಯ ಟ್ರೆಡಿಷನಲ್ ಶೋಟೋಕಾನ್ ಕರಾಟೆ ಅಕಾಡೆಮಿ ವಿದ್ಯಾರ್ಥಿಗಳು. ತರಬೇತುದಾರ ಫಕ್ಕೀರಪ್ಪ ವರಕನಹಳ್ಳಿ, ವಿದ್ಯಾರ್ಥಿಗಳಾದ ಸಿಂಧುಶ್ರೀ, ಸ್ವಪ್ನ ಬಾವಿಕಟ್ಟಿ, ಆರುಷಿ, ಎಂ.ತೇಜು, ಎಚ್.ಹರ್ಷ, ನಿಶ್ಚಿತ, ಎಂ.ಪ್ರಜ್ವಲ, ನವೀನ್‌ಕುಮಾರ್ ಇದ್ದರು.
Published on

ಹಗರಿಬೊಮ್ಮನಹಳ್ಳಿ: ದಾವಣಗೆರೆಯಲ್ಲಿ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಷಿಯನ್ ಆಯೋಜಿಸಿದ್ದ 2024ರ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಪಟ್ಟಣದ ಟ್ರೆಡಿಷನಲ್ ಶೋಟೋಕಾನ್ ಕರಾಟೆ ಅಕಾಡೆಮಿ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಹಲವು ಪ್ರಶಸ್ತಿಗಳನ್ನು ಬಾಚಿಗೊಂಡಿದ್ದಾರೆ.

ಬಾಲಕಿಯರ ವಿಭಾಗದ ಕಟಾದಲ್ಲಿ ಎಂಟು ವರ್ಷದ ಸಿಂಧುಶ್ರೀ ವರಕನಹಳ್ಳಿ ಪ್ರಥಮ ಸ್ಥಾನ ಹಾಗೂ 10 ವರ್ಷದ ಸ್ವಪ್ನಾ ಬಾವಿಕಟ್ಟಿ (ಬ್ಲಾೃಕ್‌ಬೆಲ್ಟ್) ಪ್ರಥಮ ಹಾಗೂ ಕುಮಿಟೆಯಲ್ಲಿ ದ್ವಿತೀಯ ಹಾಗೂ 11 ವರ್ಷದ ಆರುಷಿ ಕಟಾದಲ್ಲಿ ಪ್ರಥಮ, ಕುಮಿಟೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಇನ್ನೂ ಬಾಲಕರ ವಿಭಾಗದ ಕಟಾ-ಕುಮಿಟೆಯಲ್ಲಿ 7 ವರ್ಷದ ಎಂ.ತೇಜು, ಎಚ್.ಹರ್ಷ ದ್ವಿತೀಯ, ನಿಶ್ಚಿತ ಹಾಗೂ ಎಂ.ಪ್ರಜ್ವಲ್ ಕಟಾದಲ್ಲಿ ಪ್ರಥಮ, 20 ವರ್ಷ ಮೇಲ್ಪಟ್ಟ (ಬ್ಲಾಕ್‌ಬೆಲ್ಟ್) ಕಟಾ-ಕುಮಿಟೆ ಸ್ಪರ್ಧೆಯಲ್ಲಿ ನವೀನ್ ಕುಮಾರ್ ಪ್ರಥಮ ಸ್ಥಾನ ಪಡೆದು ಪದಕಗಳನ್ನು ಗೆದ್ದರು. ಮಕ್ಕಳ ಸಾಧನೆ ಗುರುತಿಸಿ ಮಂಗಳವಾರ ಸನ್ಮಾನಿಸಲಾಯಿತು. ಕರಾಟೆ ತರಬೇತುದಾರ ಫಕ್ಕೀರಪ್ಪ ವರಕನಹಳ್ಳಿ, ಸಂಸ್ಥೆಯ ಮುಖ್ಯಸ್ಥ ಸುಭಾಷ್ ಮುತ್ಕೂರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net