ಹಗರಿಬೊಮ್ಮನಹಳ್ಳಿ; 30 ಪೌರ ಕಾರ್ಮಿಕರಿಗೆ ಸನ್ಮಾನ

26092022 HB halli civic workers sanmana
Published on

ಹಗರಿಬೊಮ್ಮನಹಳ್ಳಿ: ನಗರ ನೈರ್ಮಲ್ಯ ಕಾಪಾಡುವ ಪೌರ ಕಾರ್ಮಿಕರನ್ನು ಪ್ರತಿಯೊಬ್ಬರೂ ಗುರುತಿಸಿ ಗೌರವಿಸಬೇಕು ಎಂದು ಮಾಜಿ ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತ ಲಕ್ಷ್ಮಣ ಕಲಾಲ್ ಏರ್ಪಡಿಸಿದ್ದ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪೌರ ಕಾರ್ಮಿಕರ ಸಾರ್ಥಕ ಬದುಕಿಗೆ ಬಿಜೆಪಿ ಸರ್ಕಾರದಿಂದ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಜೀವನ ಭದ್ರತೆ ನೀಡುವ ಸದುದ್ದೇಶದಿಂದ ಪೌರ ಕಾರ್ಮಿಕರಿಗೆ ವಿಶೇಷ ಆದ್ಯತೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಇಡೀ ದೇಶದಲ್ಲಿ ಪೌರ ಕಾರ್ಮಿಕರಿಗೆ ಸೈನಿಕರಷ್ಟೇ ಗೌರವ ನೀಡಬೇಕಿದೆ ಎಂದರು.

ಪುರಸಭೆಯ 30ಕ್ಕೂ ಹೆಚ್ಚು ಪೌರಕಾರ್ಮಿಕರನ್ನು ಮಾಜಿ ಸದಸ್ಯ ಲಕ್ಷ್ಮಣ ಕಲಾಲ್ ಸನ್ಮಾನಿಸಿದರು. ಪ್ರಮುಖರಾದ ಕಿನ್ನಾಳ್ ಸುಭಾಷ್, ಪಿ.ರಾಜಲಿಂಗಪ್ಪ, ಬೆಣ್ಣಿಕಲ್ಲು ಪ್ರಕಾಶ್, ಜಿ.ಎಂ.ಜಗದೀಶ, ಎಚ್.ಎಂ.ವಿಜಯಕುಮಾರ್, ಇ.ಭರತ್, ಸರ್ದಾರ್ ಯಮನೂರು, ಗಣೇಶ್, ಪಿ.ಎಂ.ನಾಗಯ್ಯ, ಮಂಜುನಾಥ, ನೀಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net