ಸರ್ಕಾರ ಜನ ವಿರೋಧಿ ಕಾಯ್ದೆ ಕೈಬಿಡಲು ಆಗ್ರಹ: ಹಗರಿಬೊಮ್ಮನಹಳ್ಳಿಯಲ್ಲಿ ಸಿಐಟಿಯು ಪದಾಧಿಕಾರಿಗಳ ಪ್ರತಿಭಟನೆ

08012021 HB Halli CITU protest
Published on

ಹಗರಿಬೊಮ್ಮನಹಳ್ಳಿ: ಕೃಷಿ ಹಾಗೂ ಕಾರ್ಮಿಕ ತಿದ್ದುಪಡಿ ಕಾಯ್ದೆಗಳ ಜಾರಿ ವಿರೋಧಿಸಿ ಪಟ್ಟಣದ ತಹಸಿಲ್ ಕಚೇರಿ ಮುಂದೆ ಸಿಐಟಿಯು ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಿಐಟಿಯು ತಾಲೂಕು ಕಾರ್ಯದರ್ಶಿ ಎಸ್.ಜಗನ್ನಾಥ ಮಾತನಾಡಿ, ದೇಶ ವಿರೋಧಿ ಕೃಷಿ ಕಾಯ್ದೆ, ಜನವಿರೋಧಿ ವಿದ್ಯುತ್ ಕಾನೂನು ಹಿಂಪಡೆಯಲು ಒತ್ತಾಯಿಸಿ ದೇಶದಲ್ಲಿ ರೈತ ಹೋರಾಟ ಹೋರಾಟ ತೀವ್ರಗೊಳುತ್ತಿದೆ. ಆದರೆ, ಕೇಂದ್ರ ಸರ್ಕಾರ ಹಠಮಾರಿ ಧೋರಣೆ ಮುಂದುವರಿಸಿದೆ. ಇದುವರೆಗೂ ಏಳು ಬಾರಿ ರೈತ ನಾಯಕರ ಜತೆ ಮಾತುಕತೆ ನಡೆಸಿದರೂ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ಸಿದ್ಧವಿಲ್ಲ. ರೈತರ ಬೆಳೆಗೆ ಬೆಂಬಲ ಬೆಲೆ ಖಾತ್ರಿಗೊಳಿಸಲು ಸರ್ಕಾರ ತಯಾರಿಲ್ಲ. ದೇಶ, ರೈತರ ರಕ್ಷಣೆಗೆ ಕೃಷಿ ಮತ್ತು ಜನ ವಿರೋಧಿ ಕಾಯ್ದೆಗಳನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ಸಂಘಟನೆ ಪದಾಧಿಕಾರಿಗಳಾದ ಕೆ.ಗೌರಮ್ಮ, ಸುನೀತಾ, ಜಿ.ಸಿದ್ದಮ್ಮ, ಎಂ.ಗೀತಾ, ಹನುಮಂತಪ್ಪ, ಯು.ತೋಟೇಶ್, ಕೃಷ್ಣ, ಹುಸೇನ್ ಪೀರ್, ಎಂ.ಅನ್ನಾಳೆಮ್ಮ, ಉಡುಚಮ್ಮ, ಟಿ.ಸೋಮಕ್ಕ, ಲಕ್ಷ್ಮೀ, ರತ್ನಮ್ಮ, ಪಿ.ಶಾಂತಾ, ಜಿ.ಮಂಜುಳಾ, ಎಚ್.ವಿ.ರೇಣುಕಾ, ಎಚ್.ಗೀತಾಬಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net