ದೇಗುಲದ ಹುಂಡಿ ಹಣ ಕಳವು

Published on

ಹಗರಿಬೊಮ್ಮನಹಳ್ಳಿ: ಚಿಲುಗೋಡು ಗ್ರಾಮದಲ್ಲಿ ಗುರುವಾರ ತಡರಾತ್ರಿ ಕರಿಯಮ್ಮದೇವಿ ದೇಗುಲದ ಕಾಣಿಕೆ ಪೆಟ್ಟಿಗೆ ಮುರಿದು ಹಣ ಕಳ್ಳತನ ಮಾಡಲಾಗಿದೆ.

ದೇಗುಲದ ಜೀರ್ಣೋದ್ಧಾರ ಕಾರ್ಯ ನಡೆದಿದ್ದು, 20ರಿಂದ 30 ಕಾರ್ಮಿಕರು ದೇಗುಲದಲ್ಲೇ ಇರುತ್ತಿದ್ದರು. ಕಾರ್ಮಿಕರು ಊರಿಗೆ ಹೋದಾಗ ಕಳ್ಳತನವಾಗಿದೆ. ಕಾರಿನಲ್ಲಿ ನಾಲ್ಕೈದು ಜನ ಬಂದು ಈ ಕೃತ್ಯ ಎಸಗಿರುವ ಬಗ್ಗೆ ಶಂಕಿಸಲಾಗಿದೆ.

ತಂಬ್ರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net