ಜಾತಿಗಣತಿಗೆ ಸರ್ವರ್ ಕಾಟ

sirigeri-1
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮಾಡಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವೇಳೆ ಸಿರಿಗೇರಿಯಲ್ಲಿ ಸರ್ವರ್ ಕೈ ಕೊಟ್ಟಿದ್ದರಿಂದ ಗಣತಿದಾರರ ತಂಡ ನೆಟ್‌ವರ್ಕ್‌ಗಾಗಿ ಕಾಯುತ್ತಿರುವುದು.
Published on

ಹಗರಿಬೊಮ್ಮನಹಳ್ಳಿ: ಜನಗಣತಿ ಮಾಡಲು ಸರ್ವರ್ ಸಮಸ್ಯೆ ಜತೆಗೆ ಶಿಕ್ಷಕರನ್ನು ಬೇರೆ ಊರಿಗೆ ಕರ್ತವ್ಯಕ್ಕೆ ನಿಯೋಜಿಸಿರುವುದರಿಂದ ಮನೆಗಳನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಇದರಿಂದಾಗಿ ಗಣತಿದಾರರು ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಕಚೇರಿ ಹತ್ತಿರ ಮಂಗಳವಾರ ಜಮಾಯಿಸಿದ್ದರು.

ಬೆಳಗ್ಗೆ 9 ಗಂಟೆಗೆ ಆಗಮಿಸಿದ್ದ ಶಿಕ್ಷಕರು ಸಮರ್ಪಕ ಮಾರ್ಗಸೂಚಿ ಇಲ್ಲದೆ ಪರದಾಡಿದರು. ಆ್ಯಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಯುಎಚ್‌ಐಡಿ ಮನೆಪಟ್ಟಿ ಇಲ್ಲದೆ ನೇರ ಆ್ಯಪ್‌ನಿಂದ ಸಮೀಕ್ಷೆಗೆ ಹೊರಟರೆ ಬೇರೆ ಪ್ರದೇಶಕ್ಕೆ ಕರೆದೊಯ್ಯುತ್ತಿದೆ ಎಂದು ಶಿಕ್ಷಕರೆಲ್ಲ ಅಸಮಾಧಾನ ವ್ಯಕ್ತಪಡಿಸಿದರು.

ಬಿಇಒ ಮೈಲೇಶ್ ಬೇವೂರು ಮಾತನಾಡಿ, ಆರಂಭದಲ್ಲಿ ಒಂದಿಷ್ಟು ಗೊಂದಲ ಇರುತ್ತವೆ ಎಂದು ತಿಳಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕೊಟ್ರೇಶ ನಾಯ್ಕ ಮಾತನಾಡಿ, ತಾಲೂಕಿನಲ್ಲಿ 436 ಜನ ಶಿಕ್ಷಕರು ಸಮೀಕ್ಷೆ ಮಾಡುತ್ತಿದ್ದಾರೆ.

ಅಂಬಳಿ, ಕೋಗಳಿ ಮತ್ತು ಅಲಬೂರು ಗ್ರಾಮಗಳ 34 ಜನ ಶಿಕ್ಷಕರು ಕೊಟ್ಟೂರು ತಾಲೂಕಿನ ತಂಡದಲ್ಲಿದ್ದು, ಈ ತಾಲೂಕಿಗೆ ಶಿಕ್ಷಕರ ಕೊರತೆ ಕಾಡುತ್ತಿದೆ ಎಂದು ತಿಳಿಸಿದರು.

ಶಿಕ್ಷಕರ ಸಂಘದ ಟಿ.ಸೋಮಶೇಖರ್, ಬಿ.ಕೊಟ್ರಪ್ಪ, ಜೆ.ಹನುಮರೆಡ್ಡಿ, ಇಟ್ಟಿಗಿ ಮಂಜುನಾಥ, ಇಟ್ಟಗಿ ಪ್ರಭಾಕರ, ಕೆ.ಬಿ.ದೀಪಿಕಾ, ಎಚ್.ಆನಂದ, ದಾದೀಬಿ, ಆಂಜನೇಯ, ಶಾಂತಕುಮಾರಿ, ಎಂ.ಯಂಕಾರೆಡ್ಡಿ, ಹೀರ‌್ಯಾನಾಯ್ಕಾ, ನಿರ್ಮಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net