ಗ್ರಾಮೀಣ ಕ್ರೀಡೆಗಳಿಂದ ಹಳ್ಳಿಗಳಲ್ಲಿ ಸೌಹಾರ್ದ

Published on

ಹಗರಿಬೊಮ್ಮನಹಳ್ಳಿ: ಬಸರಕೋಡ ಗ್ರಾಮದಲ್ಲಿ ಇತ್ತೀಚೆಗೆ ಎತ್ತಿನಗಾಡಿ ಓಟದ ಸ್ಪರ್ಧೆ ನಡೆಯಿತು. ಸ್ಪರ್ಧೆಗೆ ಚಾಲನೆ ನೀಡಿದ ಶಾಸಕ ಕೆ.ನೇಮಿರಾಜ್ ನಾಯ್ಕ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಸ್ಪರ್ಧಾ ಮನೋಭಾವದೊಂದಿಗೆ ಸೌಹಾರ್ದ ಬೆಳೆಸುತ್ತದೆ ಎಂದರು.

ಸ್ಪರ್ಧೆಯಲ್ಲಿ ಒಟ್ಟು 25ಜೋಡೆತ್ತು ಬಂಡಿಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನ ಪಡೆದ ಜೋಡೆತ್ತಿನ ಬಂಡಿ ಮಾಲೀಕ ಶೀಗನಹಳ್ಳಿ ಹನುಮಂತಪ್ಪಗೆ 25 ಸಾವಿರ ರೂ., ದ್ವಿತೀಯ ಸ್ಥಾನ ಪಡೆದ ಎತ್ತುಗಳ ಮಾಲೀಕ ಎಚ್.ಹುಲುಗಪ್ಪಗೆ 15 ಸಾವಿರ ರೂ. ಬಹುಮಾನ ನೀಡಲಾಯಿತು. ಆಯೋಜಕರಾದ ಬಿ.ಕರಿಬಸವರಾಜ್, ಎಸ್.ಪರಶುರಾಮ್, ಎಚ್.ಕರಿಯಪ್ಪ, ಮೇಟಿ, ಕುಮಾರ, ಕಿರಣ, ಸಂತೋಷ, ಆಕಾಶ, ಗೋಣಿ ಬಸವರಾಜ, ಗ್ರಾಮಸ್ಥ ಎಂ.ವಿಜಯಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net