ಶಾಸಕ ಭೀಮಾನಾಯ್ಕ ವರ್ತನೆ ಖಂಡಿಸಿ ನ.11ರಂದು ಹಗರಿಬೊಮ್ಮನಹಳ್ಳಿ ಬಂದ್ ಗೆ ಬಿಜೆಪಿ ಕರೆ

Screenshot_20201108-110848_Gallery.jpg
Published on

ಹಗರಿಬೊಮ್ಮನಹಳ್ಳಿ (ಬಳ್ಳಾರಿ): ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವೇಳೆ ಕಾಂಗ್ರೆಸ್ ಶಾಸಕ ಭೀಮಾನಾಯ್ಕ ಅವರ ವರ್ತನೆ ಖಂಡಿಸಿ ನ.11 ರಂದು ಪಟ್ಟಣ ಬಂದ್ ಗೆ ಬಿಜೆಪಿ ಕರೆ ನೀಡಿದೆ.

ಹಗರಿಬೊಮ್ಮನಹಳ್ಳಿ ಕ್ಷೇತ್ರ ವ್ಯಾಪ್ತಿಯ ಕೊಟ್ಟೂರು, ಮರಿಯಮ್ಮನಹಳ್ಳಿ ಸೇರಿದಂತೆ ಗ್ರಾಮೀಣ ಭಾಗದಿಂದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ. ಶಾಸಕ ಭೀಮಾನಾಯ್ಕ ಅವರ ರೌಡಿಸಂ, ಅಹಂಕಾರಕ್ಕೆ ಅಂತ್ಯ ಹೇಳಲು ಕಾರ್ಯಕರ್ತರು ಸಂಘಟಿತರಾಗಬೇಕು. ಮರಿಯಮ್ಮನಹಳ್ಳಿಗೆ ಕಾಲಿಡದಂತೆ ಮಾಡಿ ಅಲ್ಲಿ ಶಾಸಕ ಭೀಮಾನಾಯ್ಕಗೆ ನೆಲೆ ಇಲ್ಲದಂತೆ ಮಾಡಲಾಗಿದೆ. ಅದರ ಹತಾಶೆಯಿಂದ ಭೀಮಾನಾಯ್ಕ ಈ ರೀತಿ ವರ್ತನೆ ಮಾಡಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ವೀರೇಶ್ವರ ಸ್ವಾಮಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net