ಬಾಕಿ ಪಿಂಚಣಿ ಹಣ ಬಿಡುಗಡೆಗೊಳಿಸಲು ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಒತ್ತಾಯ

060722 HB Halli The office bearers of Devadasi Women's Liberation Organization appealed
ಹಗರಿಬೊಮ್ಮನಹಳ್ಳಿಯ ಉಪತಹಸೀಲ್ದಾರ್ ಅನ್ನದಾನೇಶ್ವರಗೆ ಬುಧವಾರ ಮನವಿ ಸಲ್ಲಿಸಿದ ದೇವದಾಸಿ ಮಹಿಳಾ ವಿಮೋಚನಾ ಸಂಘಟನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
Published on

ಹಗರಿಬೊಮ್ಮನಹಳ್ಳಿ: ಬಾಕಿಯಿರುವ ಒಂದು ವರ್ಷ ಪಿಂಚಣಿ ಹಣವನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಪದಾಧಿಕಾರಿಗಳು ಉಪತಹಸೀಲ್ದಾರ್ ಅನ್ನದಾನೇಶ್ವರಗೆ ಬುಧವಾರ ಮನವಿ ಸಲ್ಲಿಸಿದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ಸರ್ಕಾರವೇ ಘೋಷಣೆ ಮಾಡಿದ್ದ 500 ರೂ. ಪಿಂಚಣಿಯನ್ನು ಒಂದು ವರ್ಷದಿಂದ ಪಾವತಿಸಿಲ್ಲ. ಶೀಘ್ರ ಕ್ರಮವಹಿಸಬೇಕು. ಸರ್ವೇಯಲ್ಲಿ ಬಿಟ್ಟುಹೋದ ವಿಮುಕ್ತ ದೇವದಾಸಿಯರ ಹೆಸರನ್ನು ಪಟ್ಟಿಗೆ ಸೇರಿಸಬೇಕು. ಉಪಕಸಬು ಮಾಡಲು 5 ಲಕ್ಷ ರೂ. ಸಾಲ ಸೌಲಭ್ಯ ಜತೆಗೆ ಸಾಲದ ಮೊತ್ತದಲ್ಲಿ ಶೇ.25 ಬಡ್ಡಿ ರಹಿತ ಸಾಲ ನೀಡಬೇಕು. ಪ್ರತಿ ಕುಟುಂಬಕ್ಕೂ 80*80 ಚದುರ ಅಡಿ ಖಾಲಿ ಜಾಗ ನೀಡಿ, ಮನೆ ನಿರ್ಮಿಸಿಕೊಡಬೇಕು. ಅಲ್ಲಿಯೇ ಮೀನು, ಕೋಳಿ, ಹಸು ಸಾಕಣೆ ಮಾಡಲು ಸಹಾಯಧನ ನೀಡಬೇಕು. ಅವರ ಮಕ್ಕಳ ಮದುವೆಗೆ ನೀಡುವ ಪ್ರೋತ್ಸಾಹ ಧನಕ್ಕೆ ನಿಗದಿಪಡಿಸಿರುವ 28 ಷರತ್ತುಗಳನ್ನು ಕೈಬಿಟ್ಟು ವಿಮುಕ್ತ ದೇವದಾಸಿ ಪ್ರಮಾಣ ಪತ್ರದ ಆಧಾರದ ಮೇಲೆ ಪ್ರೋತ್ಸಾಹ ಧನ ನೀಡಬೇಕು. ಕೃಷಿಗೆ ಯೋಗ್ಯವಾದ 5 ಎಕರೆ ಭೂಮಿ ನೀಡಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net